ಕರ್ನಾಟಕ

karnataka

ETV Bharat / state

ಕರುನಾಡ ಅರಣ್ಯ ಸೌಂದರ್ಯಕ್ಕೆ ಮನಸೋತ 'ಡಿಸ್ಕವರಿ ಚಾನಲ್'... 2020ಕ್ಕೆ ಬರುತ್ತೆ ಡಾಕ್ಯುಮೆಂಟರಿ!

ಸದಾ ಒಂದಲ್ಲ ಒಂದು ವಿಶೇಷ ಸಂಶೋಧನೆಯಲ್ಲಿ ತೊಡಗಿ ಪ್ರಂಪಚದ ವಿಸ್ಮಯ ವಿಷಯಗಳನ್ನ ಜನರ ಮುಂದಿಡುವ ನ್ಯಾಷನಲ್ ಡಿಸ್ಕವರಿ ಚಾನಲ್ ಸದ್ಯ ಕರ್ನಾಟಕದ ಅರಣ್ಯ ಸಂಪತ್ತಿನತ್ತ ಗಮನ ಹರಿಸಿದ್ದು ಡಾಕ್ಯುಮೆಂಟರಿಯೊಂದನ್ನು ಹೊರತರಲು ಮುಂದಾಗಿದೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ

By

Published : Feb 23, 2019, 11:44 AM IST

ಮೈಸೂರು: ಕರುನಾಡ ಸಂಪತ್ಭರಿತ ಅರಣ್ಯ ಸೌಂದರ್ಯಕ್ಕೆ ಮನಸೋತಿರುವ ನ್ಯಾಷನಲ್ ಡಿಸ್ಕವರಿ ಚಾನಲ್ ಇದೇ ಮೊದಲ ಬಾರಿಗೆ ರಾಜ್ಯದ ಅರಣ್ಯ ಇಲಾಖೆಯ ಬಗ್ಗೆ ಡಾಕ್ಯುಮೆಂಟರಿ ಹೊರತರಲು ಮುಂದಾಗಿದೆ.

ಹೌದು, ಸದಾ ಒಂದಲ್ಲ ಒಂದು ವಿಶೇಷ ಸಂಶೋಧನೆಯಲ್ಲಿ ತೊಡಗುವ ನ್ಯಾಷನಲ್ ಡಿಸ್ಕವರಿ ಚಾನಲ್ ಸದ್ಯ ಕರ್ನಾಟಕದ ಅರಣ್ಯ ಸಂಪತ್ತಿನತ್ತ ಗಮನ ಹರಿಸಿದೆ. ರಾಜ್ಯದ ಅರಣ್ಯದಲ್ಲಿನ ಪ್ರಾಣಿ ಹಾಗೂ ಪಕ್ಷಿ ಸಂಕುಲ ಹೆಚ್ಚಳವಾಗುತ್ತಿರುವ ಹಿನ್ನೆಲೆ ಕುತೂಹಲದಿಂದ ಚಾನಲ್, 7 ಜನರ ತಂಡವನ್ನು ರಾಜ್ಯಕ್ಕೆ ಕಳುಹಿಸಿದೆ.

ರಾಜ್ಯದಲ್ಲಿರುವ ಅರಣ್ಯಪ್ರದೇಶವನ್ನು ಒಂದು ವರ್ಷಗಳ ಕಾಲ ಸುತ್ತಲ್ಲಿರುವ ಈ ತಂಡ, 2020ಕ್ಕೆ ಕರುನಾಡ ಅರಣ್ಯದ ಡಾಕ್ಯುಮೆಂಟರಿಯನ್ನು ಕೇಂದ್ರ ಅರಣ್ಯ ಇಲಾಖೆಗೆ ಒಪ್ಪಿಸಿ, ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಲಿದೆ.

ಈಗಾಗಲೇ ಬಂಡೀಪುರ-ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಮೂರು ತಿಂಗಳಿನಿಂದ ಬಿಡುಬಿಟ್ಟಿರುವ ಈ ತಂಡ, ಆನೆ, ಹುಲಿ, ಚಿರತೆ, ಕಾಡೆಮ್ಮೆ, ಜಿಂಕೆ, ನರಿ ಸೇರಿದಂತೆ ಪಕ್ಷಿಗಳ ಚಲನವಲನಗಳನ್ನು ಸೆರೆ ಹಿಡಿಯಲು ಸಾಕಷ್ಟು ಸಮಯವನ್ನು ಅರಣ್ಯದಲ್ಲಿಯೇ ಕಳೆಯುತ್ತಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ರಾಮದೇವರ ಬೆಟ್ಟ, ಹದ್ದುಗಳ ಉದ್ಯಾನವನ, ಆದಿಚುಂಚನಗಿರಿ ನವಿಲು ಅರಣ್ಯ ಧಾಮ, ರಂಗನತಿಟ್ಟು ಪಕ್ಷಿ ಧಾಮ, ಅರಬ್ಬಿತಿಟ್ಟು ವನ್ಯಧಾಮ, ಮೇಲುಕೋಟೆ ವನ್ಯಧಾಮ, ಬಿಆರ್‌ಟಿ ಹುಲಿ ಧಾಮ, ಕಾವೇರಿ ವನ್ಯಧಾಮ, ಮಲೈ ಮಹದೇಶ್ವರ ವನ್ಯಧಾಮ, ಪುಷ್ಪಗಿರಿ ವನ್ಯಧಾಮ, ತಲಕಾವೇರಿ ವನ್ಯಧಾಮ, ಬ್ರಹ್ಮಗಿರಿ ವನ್ಯಧಾಮ, ಕುದುರೆಮುಖ ರಾಷ್ಟ್ರೀಯ ಉದ್ಯಾನ, ಸೋಮೇಶ್ವರ ವನ್ಯಧಾಮ, ಮೂಕಾಂಬಿಕಾ ವನ್ಯಧಾಮ ಹೀಗೆ ರಾಜ್ಯದಲ್ಲಿರುವ ಎಲ್ಲ ರಾಷ್ಟ್ರೀಯ ಉದ್ಯಾನವನಗಳಿಗೆ ಭೇಟಿ ನೀಡಿ ಡಾಕ್ಯುಮೆಂಟರಿ ತಯಾರು ಮಾಡಲಿದ್ದಾರೆ.

2020ಕ್ಕೆ ಕರ್ನಾಟಕದ ಅರಣ್ಯ ಸೌಂದರ್ಯ, ಪ್ರಾಣಿ-ಪಕ್ಷಿಗಳ ಚಲನವಲನಗಳನ್ನು ನ್ಯಾಷನಲ್ ಡಿಸ್ಕವರಿ ಚಾನಲ್ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡ್ಯೊಯಲಿದೆ. ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳಲ್ಲಿ ಆನೆ, ಹುಲಿ, ಚಿರತೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಇವೆರಡು ಅರಣ್ಯ ಪ್ರದೇಶಗಳಲ್ಲಿ ಪ್ರಾಣಿಗಳ ಸಂಖ್ಯೆ ಕಂಡು ನಾಷನಲ್ ಡಿಸ್ಕವರಿ ಚಾನಲ್ ತಂಡವು ಸಂತಸಗೊಂಡಿದೆ.

ಅರಣ್ಯದೊಳಗೆ ಹೋಗಲು ಈ ತಂಡಕ್ಕೆ ಪ್ರತ್ಯೇಕವಾಗಿ ವಾಹನ ವ್ಯವಸ್ಥೆ ಮಾಡಲಾಗಿದ್ದು, 2020ರ ವೇಳೆಗೆ ರಾಜ್ಯದ ಅರಣ್ಯಪ್ರದೇಶದ ಡಾಕ್ಯುಮೆಂಟರಿ ಹೊರಬರಲಿದೆ.

ABOUT THE AUTHOR

...view details