ಕರ್ನಾಟಕ

karnataka

ETV Bharat / state

ನಿರಾಶಾದಾಯಕ ಬಜೆಟ್: ಹೋಟೆಲ್ ಮಾಲೀಕರ ಸಂಘ - ಬಜೆಟ್ ನಿರಾಶದಾಯಕವಾಗಿದೆ, ಎಂದು ಹೋಟೆಲ್ ಮಾಲೀಕರ ಸಂಘ ಅಭಿಪ್ರಾಯಪಟ್ಟಿದೆ.

ಕೇಂದ್ರ ಸರ್ಕಾರವು 2021-22ರ ಬಜೆಟ್​ ಮಂಡಿಸಿದ್ದು, ಹೋಟೆಲ್ ಉದ್ಯಮ ಹಾಗೂ ಪ್ರವಾಸೋದ್ಯಮಕ್ಕೆ ಯಾವುದೇ ರೀತಿಯ ಸೌಲಭ್ಯಗಳು, ರಿಯಾಯಿತಿಗಳನ್ನು ನೀಡಿಲ್ಲ. ಹಾಗಾಗಿ ಬಜೆಟ್​ ತೀರಾ ನಿರಾಶಾದಾಯಕವಾಗಿದೆ ಎಂದು ಹೋಟೆಲ್​ ಮಾಲೀಕರ ಸಂಘ ಹೇಳಿದೆ.

hotel
ಹೋಟೆಲ್

By

Published : Feb 2, 2021, 7:41 AM IST

ಮೈಸೂರು:ವಿತ್ತ ಸಚಿವೆ ನಿರ್ಮಲಾ‌ ಸೀತಾರಾಮನ್ ಮಂಡಿಸಿರುವ ಬಜೆಟ್ ನಿರಾಶಾದಾಯಕವಾಗಿದೆ ಎಂದು ಹೋಟೆಲ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಸಿ‌.ನಾರಾಯಣಗೌಡ ಹೇಳಿದರು.

ಹೊಟೇಲ್​ ಮಾಲೀಕರ ಸಂಘದ ಜಿಲ್ಲಾಧ್ಯಕ್ಷರ ಪ್ರತಿಕ್ರಿಯೆ

ಹೋಟೆಲ್ ಉದ್ಯಮ ಹಾಗೂ ಪ್ರವಾಸೋದ್ಯಮಕ್ಕೆ ಯಾವುದೇ ರೀತಿಯ ಸೌಲಭ್ಯಗಳು, ರಿಯಾಯಿತಿ, ಜಿಎಸ್​ಟಿ ಕಡಿತ, ಹೊಸ ಯೋಜನೆಗಳು, ಪ್ರವಾಸೋದ್ಯಮ ಸಾಲಕ್ಕೆ ಬಡ್ಡಿ ರಹಿತ(ಇಎಂಐ)‌ಯಾವುದೇ ರೀತಿಯ ಆದ್ಯತೆಗಳನ್ನು ನಮ್ಮ ಕ್ಷೇತ್ರಕ್ಕೆ ನೀಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಅತಿಯಾಗಿ‌ ಏರಿಕೆಯಾಗುತ್ತಿದ್ದು ಅಗತ್ಯ ವಸ್ತುಗಳ‌ ಬೆಲೆ ಗಗನಕ್ಕೆ ಏರುತ್ತಿವೆ. ಹೋಟೆಲ್ ಉದ್ಯಮ ಈಗಾಗಲೇ ಪೂರ್ಣ ನೆಲಕಚ್ಚಿದೆ. ನಾವು ಬಹಳಷ್ಟು ನಿರೀಕ್ಷೆಯಲ್ಲಿದ್ದೆವು. ಆದರೆ ನಮ್ಮ ನಿರೀಕ್ಷೆ ಹುಸಿಯಾಗಿದೆಯೆಂದು ನಾರಾಯಣಗೌಡ ತಿಳಿಸಿದರು.

ABOUT THE AUTHOR

...view details