ಕರ್ನಾಟಕ

karnataka

ETV Bharat / state

ಮೈಸೂರು ಅತ್ಯಾಚಾರ ಪ್ರಕರಣಕ್ಕೆ ‘ಮಾನಿನಿ’ ಹೆಸರಿಟ್ಟ ಇಂದ್ರಜಿತ್ ಲಂಕೇಶ್​​ - ನಿರ್ದೇಶಕ ಇಂದ್ರಜಿತ್ ಲಂಕೇಶ್​​

ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಗೆ ನ್ಯಾಯ ಸಿಗುವಂತೆ ಹಾಗೂ ಕಾಮುಕರನ್ನು ಬಂಧಿಸುವಂತೆ ಎಲ್ಲೆಡೆ ಒತ್ತಾಯಿಸಲಾಗುತ್ತಿದೆ. ಇವತ್ತು ಘಟನೆ ಖಂಡಿಸಿ ಸುದ್ದಿಗೋಷ್ಠಿ ನಡೆಸಿದ ನಿರ್ದೇಶಕ ಇಂದ್ರಜಿತ್ ಲಂಕೇಶ್, ಈ ಪ್ರಕರಣಕ್ಕೆ 'ಮಾನಿನಿ' ಎಂದು ಹೆಸರಿಡುವುದಾಗಿ ತಿಳಿಸಿದ್ದಾರೆ.

director-indrakith-lankesh
ನಿರ್ದೇಶಕ ಇಂದ್ರಜಿತ್ ಲಂಕೇಶ್​​

By

Published : Aug 27, 2021, 12:49 PM IST

ಮೈಸೂರು: ದೆಹಲಿಯ 'ನಿರ್ಭಯ' ಪ್ರಕರಣದ ನಂತರದಲ್ಲಿ ಮೈಸೂರಿನಲ್ಲಿ ನಡೆದ ಈ ಪ್ರಕರಣಕ್ಕೆ ‘ಮಾನಿನಿ’ ಎಂದು ಹೆಸರಿಡಬೇಕೆಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಮೈಸೂರಿನ ಅತ್ಯಾಚಾರ ಪ್ರಕರಣ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಇಂದ್ರಜಿತ್ ಲಂಕೇಶ್​

ಅತ್ಯಾಚಾರ ಸಂತ್ರಸ್ತೆಗೆ ರಾಜ್ಯ ಸರ್ಕಾರ ನಿರ್ಭಯ ಯೋಜನೆ ಅಡಿಯಲ್ಲಿ ಹೆಚ್ಚಿನ ಪರಿಹಾರ ಕೊಡಬೇಕು. ಮೈಸೂರನ್ನು ತಾಲಿಬಾನ್​​ಗೆ ಹೋಲಿಸುತ್ತಿರುವುದು ನೋವಿನ ಸಂಗತಿ. ಇನ್ನು ಕೆಲವರು ಉತ್ತರಪ್ರದೇಶಕ್ಕೆ ಹೋಲಿಸುತ್ತಿದ್ದಾರೆ. ಅತ್ಯಾಚಾರ ಮಾಡಿದವರಿಗೆ ಯಾವ ಶಿಕ್ಷೆ ಎಂದು ಬಸ್ ನಿಲ್ದಾಣಗಳಲ್ಲಿ ಹಾಕಬೇಕಿದೆ. ರಾಜಕಾರಣಿಗಳು ನಾನೇ ಈ ನಿಲ್ದಾಣ ಮಾಡಿಸಿದ್ದು ಎಂದು ಹಾಕ್ತಾರೆ. ಆದರೆ ಇಂದು ರೇಪ್ ಕೇಸ್​​​ಗೆ ಯಾವ ಶಿಕ್ಷೆ ಎಂದು ಹಾಕಬೇಕಿದೆ‌ ಎಂದರು.

ನಾನು ಒಂದು ತಿಂಗಳ ಹಿಂದೆಯೇ ಆಡಳಿತ ದೌರ್ಬಲ್ಯದ ಬಗ್ಗೆ ಮಾತನಾಡಿದ್ದೆ. ರಾಜಕಾರಣಿಗಳು ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಹಿಂದೆ ಶಿಖಾ ಅವರು ಡಿಸಿ ಆಗಿದ್ದಾಗ ಆಕೆಯ ವಿರುದ್ಧ ರಾಜಕಾರಣಿಗಳು ಹೇಗೆ ವರ್ತನೆ ತೋರಿದ್ದರು ಎಂದು ಎಲ್ಲರಿಗೆ ಗೊತ್ತಾಗಿದೆ. ಇಂತಹ ಘಟನೆಗಳು ಹಿರಿಯ ನಾಗರಿಕರನ್ನು ಡಿಸ್ಟರ್ಬ್ ಮಾಡಿದೆ ಎಂದು ಹೇಳಿದರು.

ಇಲ್ಲಿನ ಉಸ್ತುವಾರಿ ಮಂತ್ರಿಗಳು ಯಾವ ರೀತಿ ವರ್ತನೆ ಮಾಡುತ್ತಿದ್ದಾರೆ. ಹೇಗೆ ನಡೆದುಕೊಳ್ಳುತ್ತಿದ್ದಾರೆ? ಯಾರು ಆಡಳಿತ ಪಕ್ಷ, ಯಾರು ವಿರೋಧ ಪಕ್ಷ ಅಂತ ಗೊತ್ತಾಗುತ್ತಿಲ್ಲ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ ಸೋಮಶೇಖರ್ ಅವರು ಜಿಲ್ಲೆ ಮುನ್ನೆಡಸಲು ಫೇಲ್ಯೂರ್ ಆಗಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ:ಮೈಸೂರು ಸಾಮೂಹಿಕ ಅತ್ಯಾಚಾರ ಕೇಸ್: ಡಿಜಿಪಿಗೆ ತನಿಖೆ ಮೇಲುಸ್ತುವಾರಿ ವಹಿಸಿದ ಸಿಎಂ

ABOUT THE AUTHOR

...view details