ಮೈಸೂರು:ಇಡೀ ದೇಶದಲ್ಲಿ ಆಪರೇಷನ್ ಕಮಲ ಸಂಸ್ಕೃತಿ ಹುಟ್ಟುಹಾಕಿದ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ಕಿಡಿಕಾರಿದ್ದಾರೆ.
ಮಾಜಿ ಸಂಸದ ಧ್ರುವನಾರಾಯಣ ಕಿಡಿ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಆಪರೇಷನ್ ಅನ್ನೋ ಕೆಟ್ಟ ಸಂಪ್ರದಾಯ ಇರಲಿಲ್ಲ, ಮೊದಲ ಬಾರಿಗೆ ಆಪರೇಷನ್ ಕಮಲ ಕೆಟ್ಟ ಪದ್ಧತಿ ಹುಟ್ಟು ಹಾಕಿದವರು ಬಿಜೆಪಿಯ ಜನಾರ್ಧನ ರೆಡ್ಡಿ, ಶ್ರೀರಾಮುಲು. ಶಾಸಕರಿಗೆ ಹಣ ನೀಡಿ ರಾಜೀನಾಮೆ ಕೊಡಿಸಿ, ಮತ್ತೆ ಉಪ ಚುನಾವಣೆ ಮಾಡಿಸಿದರು.
ತದನಂತರ ಚುನಾವಣೆಗಳಲ್ಲಿ ಜನಾರ್ದನ ರೆಡ್ಡಿ ,ಶ್ರೀರಾಮುಲುಗೆ ಜನ ತಕ್ಕ ಪಾಠ ಕಲಿಸಿದರು. ಅದೇ ರೀತಿ ಇದೀಗ ಬಿಜೆಪಿಯವರು ಎರಡನೇ ಅಧ್ಯಾಯ ಪ್ರಾರಂಭಿಸಿದ್ದಾರೆ. ಈಗಲೂ ಬಿಜೆಪಿಗೆ ಜನ ಪಾಠ ಕಲಿಸುತ್ತಾರೆ ಎಂದರು.
ಶಾಸಕರು ತಮ್ಮ ಕ್ಷೇತ್ರದಲ್ಲಿ ಬರಗಾಲ, ಜನರ ಸಮಸ್ಯೆ ಬಗ್ಗೆ ಗಮನ ಹರಿಸಬೇಕು. ಆದರೆ ಇತರೆ ಪಕ್ಷಗಳ ಆಸೆ ಆಮಿಷಗಳಿಗೆ ಬಲಿಯಾಗಿ ರಾಜೀನಾಮೆ ಕೊಟ್ಟು ಹೋಗಿದ್ದು, ತಮ್ಮ ಸಮಸ್ಯೆ ಬಗ್ಗೆ ಬೇಡಿಕೆಗಳ ಬಗ್ಗೆ ಆಯಾ ಪಕ್ಷದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳೊಟ್ಟಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು, ಏಕಾಏಕಿ ರಾಜೀನಾಮೆ ನೀಡಿ ಮತದಾರರಿಗೆ ಅವಮಾನ ಮಾಡಿದ್ದಾರೆ ಎಂದು ತಿಳಿಸಿದರು
ಅತೃಪ್ತ ಶಾಸಕರ ನಡೆ ಖಂಡಿಸಿದ ಆರ್.ಧ್ರುವನಾರಾಯಣ, ಮುಖ್ಯಮಂತ್ರಿಗಳು ವಿಶ್ವಾಸ ಮತಗಳಿಸುತ್ತಾರೆ ಎಂದು ಹೇಳಿದರು.