ಮೈಸೂರು:ಕಳೆದ 45 ದಿನಗಳಿಂದಲೂ ಅರಮನೆಯಲ್ಲಿ ವಾಸ್ತವ್ಯ ಹೂಡಿದ್ದ ದಸರಾ ಗಜಪಡೆಯಲ್ಲಿ ಇಂದು ಅಭಿಮನ್ಯು, ಜಯಪ್ರಕಾಶ, ಗೋಪಾಲಸ್ವಾಮಿ ಆನೆಗಳು ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಅರಮನೆಯ ಆವರಣದಿಂದ ತೆರಳಿದ್ದು, ಅದರಲ್ಲಿ ಜಯಪ್ರಕಾಶ ಆನೆ ಲಾರಿಯನ್ನು ಹತ್ತಲು 2 ಗಂಟೆಗೂ ಹೆಚ್ಚು ಕಾಲ ಸತಾಯಿಸಿತು.
ನರಭಕ್ಷಕ ಹುಲಿ ಕಾರ್ಯಾಚರಣೆಗೆ ಹೊರಟ ದಸರಾ ಆನೆಗಳು.. ಸತಾಯಿಸಿದ ಜಯಪ್ರಕಾಶ.. - ಅಭಿಮನ್ಯು
ಕಳೆದ 45 ದಿನಗಳಿಂದಲೂ ಅರಮನೆಯಲ್ಲಿ ವಾಸ್ತವ್ಯ ಹೂಡಿದ್ದ ದಸರಾ ಗಜಪಡೆಯಲ್ಲಿ ಇಂದು ಅಭಿಮನ್ಯು, ಜಯಪ್ರಕಾಶ, ಗೋಪಾಲಸ್ವಾಮಿ ಆನೆಗಳು ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಅರಮನೆಯ ಆವರಣದಿಂದ ತೆರಳಿದ್ದು, ಅದರಲ್ಲಿ ಜಯಪ್ರಕಾಶ ಆನೆ ಲಾರಿಯನ್ನು ಹತ್ತಲು 2 ಗಂಟೆಗೂ ಹೆಚ್ಚು ಕಾಲ ಸತಾಯಿಸಿತು.
ಚಾಮರಾಜನಗರದ ಬಂಡೀಪುರ ಅರಣ್ಯ ವ್ಯಾಪ್ತಿಯ ನರ ಭಕ್ಷಕ ಹುಲಿ ಕಾರ್ಯಾಚರಣೆಗಾಗಿ 3ದಸರಾ ಆನೆಗಳು ತುರ್ತಾಗಿ ಲಾರಿಯಲ್ಲಿ ಹೊರಟಿದ್ದು, ನಾಳೆಯಿಂದ ಕಾರ್ಯಾಚರಣೆ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸಲು ಆಗಮಿಸಿರುವ ಜಯಪ್ರಕಾಶ ಆನೆ, ಮೊದಲ ಬಾರಿಗೆ ಲಾರಿಯಲ್ಲಿ ಸಂಚಾರ ಮಾಡುತ್ತಿರುವುದಿಂದ ಈ ರೀತಿ ಸತಾಯಿಸುವುದು ಸಾಮಾನ್ಯ. ಆದ್ದರಿಂದ ಅಭಿಮನ್ಯುವಿನ ಸಹಾಯದಿಂದ ಈ ಆನೆಯನ್ನು ಲಾರಿಗೆ ಹತ್ತಿಸಲಾಯಿತು.
ನಾಳೆ ಬೆಳಗ್ಗೆ ಉಳಿದ 10 ಆನೆಗಳು ತಮ್ಮ ತಮ್ಮ ಶಿಬಿರಗಳಿಗೆ ತೆರಳಲಿದ್ದು, ಪ್ರತಿಯೊಬ್ಬ ಮಾವುತರಿಗೂ ಹಾಗೂ ಕಾವಾಡಿಗರಿಗೆ 10 ಸಾವಿರ ರೂ.ಗೌರವ ಧನ ನೀಡಲಾಗಿದೆ. ಜೊತೆಗೆ ಈ ಬಾರಿ ದಸರಾದಲ್ಲಿ 3 ಆನೆಗಳು ಜನಜಂಗುಳಿಯಲ್ಲಿ ಗದ್ದಲ ಮಾಡಬಹುದು ಎಂಬ ಕಾರಣಕ್ಕೆ ಮೆರವಣಿಗೆಯಲ್ಲಿ ಭಾಗವಹಿಸಲಿಲ್ಲ. ಅದನ್ನು ಬಿಟ್ಟರೆ ಜಂಬೂಸವಾರಿಯಲ್ಲಿ ಭಾಗವಹಿಸಿರುವ ಎಲ್ಲಾ ಆನೆಗಳು ಆರೋಗ್ಯವಾಗಿವೆ ಎಂದು ಪಶುವೈದ್ಯ ಡಾ.ನಾಗರಾಜ್ ತಿಳಿಸಿದ್ದಾರೆ.