ಕರ್ನಾಟಕ

karnataka

ಹುಣ್ಣಿಮೆ ದಿನದಂದು ನಂಜನಗೂಡು ದೇವಾಲಯಕ್ಕೆ ಭಕ್ತರ ಪ್ರವೇಶ ನಿಷೇಧ

By

Published : Jul 31, 2020, 10:28 PM IST

ಅಗಸ್ಟ್​3,2020ರಂದು ಹುಣ್ಣಿಮೆ ಹಾಗೂ ಮುಂದಿನ‌ ಆದೇಶ ಬರುವವರೆಗೂ ಎಲ್ಲಾ ಹುಣ್ಣಿಮೆಗಳಂದು ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಭಕ್ತರಿಗೆ ನಿಷೇಧ ಹೇರಲಾಗಿದೆ..

ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್
ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್

ಮೈಸೂರು :ಹುಣ್ಣಿಮೆ ದಿನದಂದು ನಂಜನಗೂಡು ದೇವಾಲಯಕ್ಕೆ ಭಕ್ತರು ಹೆಚ್ಚಾಗಿ ಬರುವ ಹಿನ್ನೆಲೆ ಆ ದಿನಗಳಂದು ಭಕ್ತರಿಗೆ ನಿಷೇಧ ಹೇರಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ‌‌.

ಸರ್ಕಾರ ಕೆಲವು ಆದೇಶದ ಮೇರೆಗೆ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಭಕ್ತರು ಹಾಗೂ ಸಾರ್ವಜನಿಕರ ದೇವರ ದರ್ಶನ ಪಡೆಯಲು ಅನುಮತಿ ನೀಡಿತ್ತು. ಆದರೆ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಹುಣ್ಣಿಮೆ ದಿನದಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎಂದು ಸ್ಥಳೀಯರು ಮನವಿ ಸಲ್ಲಿಸಿದ್ದು, ಹುಣ್ಣಿಮೆ ದಿನ ದೇವಾಲಯಕ್ಕೆ ಭಕ್ತರಿಗೆ ನಿಷೇಧ ಹೇರಬೇಕೆಂದು ಮನವಿ ಸಲ್ಲಿಸಿದ್ದಾರೆ.

ಅದರಂತೆ ಮುಂದಿನ ಸೋಮವಾರ ಅಂದರೆ ಅಗಸ್ಟ್​3,2020ರಂದು ಹುಣ್ಣಿಮೆ ಹಾಗೂ ಮುಂದಿನ‌ ಆದೇಶ ಬರುವವರೆಗೂ ಎಲ್ಲಾ ಹುಣ್ಣಿಮೆಗಳಂದು ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಭಕ್ತರಿಗೆ ನಿಷೇಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

ABOUT THE AUTHOR

...view details