ಮೈಸೂರು: ಕೊರೊನಾ ವೈರಸ್ ಹಾವಳಿಯಿಂದಾಗಿ ಮುಚ್ಚಲಾಗಿದ್ದ ನಗರದಲ್ಲಿನ ದೇವರಾಜು ಮಾರುಕಟ್ಟೆಯನ್ನು ಇಂದಿನಿಂದ ಪುನಃ ತೆರೆಯಲಾಗಿದೆ.
ನಾಲ್ಕು ದಿನಗಳ ನಂತರ ಪುನಃ ತೆರೆದ ದೇವರಾಜ ಮಾರುಕಟ್ಟೆ
ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮೈಸೂರಿನ ದೇವರಾಜ ಮಾರುಕಟ್ಟೆ ಸೇರಿದಂತೆ ಇನ್ನಿತರ ಮಾರ್ಕೆಟ್ಗಳನ್ನು ಸ್ಯಾನಿಟೈಸ್ ಮಾಡುವ ಸಲುವಾಗಿ ನಾಲ್ಕು ದಿನಗಳ ಕಾಲ ಬಂದ್ ಮಾಡಲಾಗಿದ್ದು, ಇಂದಿನಿಂದ ಪುನಃ ತೆರೆಯಲಾಗಿದೆ.
ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಿಗೆ ಸ್ಯಾನಿಟೈಸ್ ಮಾಡಿ ಮುಚ್ಚಲಾಗಿತ್ತು. ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಾದ ದೇವರಾಜ ಮಾರುಕಟ್ಟೆ, ಸಂತೆಪೇಟೆ, ಶಿವರಾಮಪೇಟೆ, ಮನ್ನಾರ್ ಮಾರ್ಕೆಟ್, ಬೋಟಿ ಬಜಾರ್ ಈ ಸ್ಥಳಗಳಿಗೆ ನಾಲ್ಕು ದಿನದ ಹಿಂದೆ ಸ್ಯಾನಿಟೈಸ್ ಮಾಡಿ ಮುಚ್ಚಲಾಗಿತ್ತು.
ಸ್ಯಾನಿಟೈಸ್ ಕಾರ್ಯ ಪೂರ್ಣಗೊಂಡ ನಂತರ ವ್ಯಾಪಾರ ವಹಿವಾಟಿಗೆ ಅನುಮತಿ ನೀಡಲಾಗಿದೆ. ಸತತ 60 ದಿನಗಳ ಲಾಕ್ಡೌನ್ ನಿಂದ ಕಂಗೆಟ್ಟಿದ್ದ ವ್ಯಾಪಾರಿಗಳಿಗೆ ಮತ್ತೆ ಮಾರ್ಕೆಟ್ ಬಂದ್ ಆಗಲಿದೆ ಎಂಬ ವಿಷಯ ತಿಳಿದು ಕಂಗಾಲಾಗಿದ್ದರು. ಆದರೆ, ಸ್ಯಾನಿಟೈಸ್ ಮಾಡಿ ನಾಲ್ಕು ದಿನಗಳ ನಂತರ ವ್ಯಾಪಾರ ವಹಿವಾಟಿಗೆ ಅನುಮತಿ ನೀಡಿರುವುದು ಬದುಕಿನ ಆತಂಕ ದೂರವಾಗುವಂತೆ ಮಾಡಿದೆ.