ಮೈಸೂರು:ಗಿರಿಜನರ ಸಮಸ್ಯೆ ಆಲಿಸಲು ಹಾಗೂ ಡಾ.ಮುಜಾಫರ್ ಅಸಾದಿ ಬಗ್ಗೆ ಚರ್ಚಿಸಲು ಉಪ ಲೋಕಾಯುಕ್ತ ಬಿ.ಎಸ್. ಪಾಟೀಲ ಅವರು ಹಾಡಿಗೆ ತೆರಳಿ ಗಿರಿಜನರ ಸಂಕಷ್ಟಗಳನ್ನು ಕಣ್ಣಾರೆ ಕಂಡು ಬೇಸರ ವ್ಯಕ್ತಪಡಿಸಿದರು.
ಹೆಚ್.ಡಿ.ಕೋಟೆ ತಾಲೂಕಿನ ಸೊಳ್ಳೆಪುರ ಹಾಡಿಗೆ ಭೇಟಿ ನೀಡಿದ ಬಿ.ಎಸ್.ಪಾಟೀಲ, ಡಾ.ಮುಜಾಫರ್ ಆಸಾದಿ ವರದಿ ವಿಳಂಬದಿಂದ ಗಿರಿಜನರಿಗೆ ಆಗುತ್ತಿರುವ ಅನ್ಯಾಯ, ಬುಡಕಟ್ಟು ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ವಿಳಂಬ, ಕಾಡು ಕುರುಬ, ಬೆಟ್ಟ ಕುರುಬ ಪಂಗಡದವರಿಗೆ ವಿಶೇಷ ಅನುದಾನದಲ್ಲಿ ಗುಂಪು ನಿರ್ಮಾಣ ಬಗ್ಗೆ, ವಿಶ್ರಾಂತಿ ಗೃಹ ನಿರ್ಮಿಸಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.