ಕರ್ನಾಟಕ

karnataka

ETV Bharat / state

ಮಕ್ಕಳ ವಯಸ್ಸು ಪತ್ತೆಗೆ ಸಾರಿಗೆ ಇಲಾಖೆ ಹೊಸ ಪ್ಲಾನ್.. ಬಸ್​​ನಲ್ಲಿ ಇನ್ಮುಂದೆ ನೂತನ ಮಾನದಂಡ

ಮಕ್ಕಳಿಗೆ ಕಡಿಮೆ ವಯಸ್ಸು ಹೇಳಿ ಸಾರಿಗೆ ಇಲಾಖೆ ಬಸ್​ನಲ್ಲಿ ಪ್ರಯಾಣಿಸುವ ಪೋಷಕರು ಟಿಕೆಟ್​ ತಪ್ಪಿಸಿ ಓಡಾಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆ ಬಸ್​ನಲ್ಲಿ ಅವರ ಯವಸ್ಸು ಕಂಡುಕೊಳ್ಳಲು ಹೊಸ ಮಾನದಂಡ ಪ್ರಯೋಗಿಸಲು ಇಲಾಖೆ ಮುಂದಾಗಿದೆ.

department-of-transportation-new-plan-for-child-age-detection
ಮಕ್ಕಳ ವಯಸ್ಸು ಪತ್ತೆಗೆ ಸಾರಿಗೆ ಇಲಾಖೆ ಹೊಸ ಪ್ಲಾನ್

By

Published : Feb 26, 2021, 3:04 PM IST

ಮೈಸೂರು: ಸಾರಿಗೆ ಬಸ್​​​ನಲ್ಲಿ ಪೋಷಕರೊಂದಿಗೆ ಮಕ್ಕಳು ಪ್ರಯಾಣ ಮಾಡುವಾಗ ಇನ್ಮುಂದೆ ಅವರ ವಯಸ್ಸನ್ನು ಕಡಿಮೆ ಹೇಳಿ ಸಿಕ್ಕಿ ಬೀಳಬೇಡಿ. ಏಕೆಂದರೆ ಮೈಸೂರು ನಗರ ಸಾರಿಗೆ ಹೊಸ ಮಾನದಂಡ ಪ್ರಯೋಗಿಸಲು ಮುಂದಾಗಿದೆ.

ಮೈಸೂರು ನಗರ ಸಾರಿಗೆ ಬಸ್​​​ನಲ್ಲಿ ಪೋಷಕರ ಜೊತೆ ಚಿಕ್ಕ ಮಕ್ಕಳು ಪ್ರಯಾಣ ಮಾಡುವಾಗ, ಚಿಕ್ಕ ಮಕ್ಕಳಿಗೆ ಟಿಕೆಟ್ ತೆಗೆದುಕೊಳ್ಳಿ ಎಂದರೆ ಕಂಡಕ್ಟರ್ ಜೊತೆ ಪೋಷಕರು ಗಲಾಟೆಗೆ ಇಳಿದು, ನನ್ನ ಮಗ ಚಿಕ್ಕವನು ಎಂದು ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಾರೆ.

ಮಕ್ಕಳ ವಯಸ್ಸು ಪತ್ತೆಗೆ ಸಾರಿಗೆ ಇಲಾಖೆ ಹೊಸ ಪ್ಲಾನ್

ಇದನ್ನು ಗಮನಿಸಿದ ಸಾರಿಗೆ ಇಲಾಖೆಯ ಅಧಿಕಾರಿಗಳು ಬಸ್​​ನ ಒಳಗೆ ಇರುವ ಕಂಬಗಳಿಗೆ ಬಿಳಿ ಬಣ್ಣ ಬಳಿದಿದ್ದು, ಬಿಳಿ ಬಣ್ಣದ ಕೆಳಗಿದ್ದರೆ ಆ ಮಗು ವಯಸ್ಸಿನಲ್ಲಿ ಕಡಿಮೆ ಇದೆ ಅದಕ್ಕೆ ಉಚಿತ ಪ್ರಯಾಣ. ಬಿಳಿ ಬಣ್ಣದ ಸಮಾನವಾಗಿ ಇದ್ದರೆ ಅರ್ಧ ಟಿಕೆಟ್, ಬಿಳಿ ಬಣ್ಣ ಮೇಲಿದ್ದರೆ ಆ ಮಗು ಪೂರ್ತಿ ಟಿಕೆಟ್ ಎಂಬ ಮಾನದಂಡವನ್ನು ನಗರ ಸಾರಿಗೆಯಲ್ಲಿ ಅಳವಡಿಸಿದ್ದು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ.

ಇದನ್ನೂ ಓದಿ:ಮಾಜಿ ಸಿಎಂ ಸಿದ್ದರಾಮಯ್ಯ ಹೆಸರು ಹೇಳದೇ ಟಾಂಗ್ ಕೊಟ್ಟ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್

ABOUT THE AUTHOR

...view details