ಕರ್ನಾಟಕ

karnataka

ETV Bharat / state

ನಾಲ್ವಡಿ ಜಯಂತಿಯನ್ನು 'ಉತ್ತಮ ಆಡಳಿತ ದಿನ'ವನ್ನಾಗಿ ಘೋಷಿಸಿ: ಯದುವೀರ ಕೃಷ್ಣರಾಜ ಒಡೆಯರ್

ಸರ್.ಎಂ.ವಿಶ್ವೇಶ್ವರಯ್ಯನವರು ಜಯಂತಿಯಂದು 'ಇಂಜಿನಿಯರ್ಸ್​ ದಿನಾಚರಣೆ' ಎಂದು ಆಚರಿಸಲಾಗುತ್ತದೆ. ಅಂತೆಯೇ ನಾಲ್ವಡಿ ಜಯಂತಿಯನ್ನು 'ಉತ್ತಮ ಆಡಳಿತ ದಿನ' ಎಂದು ಘೋಷಿಸುವ ಮೂಲಕ ಗೌರವಿಸಬೇಕು ಎಂದು ಯದುವೀರ ಕೃಷ್ಣರಾಜ ಒಡೆಯರ್ ಸರ್ಕಾರಕ್ಕೆ ಸಲಹೆ ನೀಡಿದರು.

ಯದುವಂಶಸ್ಥ ಯದುವೀರ ಕೃಷ್ಣರಾಜ ಒಡೆಯರ್
ಯದುವಂಶಸ್ಥ ಯದುವೀರ ಕೃಷ್ಣರಾಜ ಒಡೆಯರ್

By

Published : Jun 5, 2020, 9:29 AM IST

ಮೈಸೂರು: ಮೈಸೂರಿನ ರಾಜವಂಶಸ್ಥ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯನ್ನು 'ಉತ್ತಮ ಆಡಳಿತ ದಿನ'ವೆಂದು ಘೋಷಣೆ ಮಾಡಬೇಕು ಎಂದು ಯದುವಂಶಸ್ಥ ಯದುವೀರ ಕೃಷ್ಣರಾಜ ಒಡೆಯರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಅರಮನೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯನ್ನು ಸರಳವಾಗಿ ಆಚರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ ಎಂ.ವಿಶ್ವೇಶ್ವರಯ್ಯನವರು ಜಯಂತಿಯಂದು 'ಇಂಜಿನಿಯರ್ಸ್​ ದಿನಾಚರಣೆ' ಎಂದು ಆಚರಿಸಲಾಗುತ್ತದೆ. ಅಂತೆಯೇ ನಾಲ್ವಡಿ ಜಯಂತಿಯನ್ನು 'ಉತ್ತಮ ಆಡಳಿತ ದಿನ' ಎಂದು ಘೋಷಿಸುವ ಮೂಲಕ ಗೌರವಿಸಬೇಕು ಎಂದು ಅವರು ಸಲಹೆ ನೀಡಿದರು.

ಮೈಸೂರಿನಲ್ಲಿ ಯದುವೀರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಇದೇ ವೇಳೆ ಕೊರೊನಾ ಕುರಿತು ಮಾತನಾಡಿದ ಯದುವೀರ್, ಕೊರೊನಾ ಸಾಂಕ್ರಾಮಿಕ ರೋಗವಾಗಿರುವುದರಂದ ಬೇಗ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ಸರ್ಕಾರದ ಸೂಚಿಸಿದ ಮಾರ್ಗಸೂಚಿಗಳನ್ನು ಸಾರ್ವಜನಿಕರು ಅನುಸರಿಸಬೇಕು. ಶತಮಾನದ ಹಿಂದೆ ಕೂಡ ಇಂತಹ ಸಾಂಕ್ರಾಮಿಕ ಕಾಣಿಸಿಕೊಂಡಿತ್ತು ಎಂದು ಹೇಳಿದರು.

ABOUT THE AUTHOR

...view details