ಕರ್ನಾಟಕ

karnataka

ETV Bharat / state

ಈಜಲು ಹೋಗಿದ್ದ ಬಿಎಸ್​ಪಿ ತಾಲೂಕು ಅಧ್ಯಕ್ಷ ನೀರುಪಾಲು - ನಂಜನಗೂಡಿನ ಸಿಂಗಾರಿಪುರ ಗ್ರಾಮ

ಈಜಲು ಹೋಗಿ ಬಿಎಸ್​​ಪಿ ಪಕ್ಷದ ನಂಜನಗೂಡು ತಾಲೂಕು ಅಧ್ಯಕ್ಷ ರಾಮಚಂದ್ರ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ನಂಜನಗೂಡು ತಾಲೂಕು ಅಧ್ಯಕ್ಷ
ನಂಜನಗೂಡು ತಾಲೂಕು ಅಧ್ಯಕ್ಷ

By

Published : Oct 12, 2020, 10:57 AM IST

ಮೈಸೂರು: ವಾಕಿಂಗ್ ಮುಗಿಸಿ ಕಬಿನಿ ನಾಲೆಯಲ್ಲಿ ಈಜಲು ಹೋದ ಬಿಎಸ್​​ಪಿ ಪಕ್ಷದ ನಂಜನಗೂಡು ತಾಲೂಕು ಅಧ್ಯಕ್ಷ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ರಾಮಚಂದ್ರ (48) ಈಜಲು ಹೋಗಿ ನೀರುಪಾಲಾದವರು. ಇವರು ನಂಜನಗೂಡಿನ ಸಿಂಗಾರಿಪುರ ಗ್ರಾಮದ ನಿವಾಸಿಯಾಗಿದ್ದು, ವಾಕಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ದೇಹದಲ್ಲಿ ಹೆಚ್ಚು ಬೆವರು ಕಾಣಿಸಿಕೊಂಡ ಹಿನ್ನೆಲೆ ಸಮೀಪದ ಕಬಿನಿ ನಾಲೆಯಲ್ಲಿ ಈಜಲು ಹೋಗಿದ್ದರು ಎನ್ನಲಾಗಿದೆ.

ರಾಮಚಂದ್ರ ನಾಲೆಯಲ್ಲಿ ಮುಳುಗುತ್ತಿರುವುದನ್ನು ಕಂಡ ಯುವಕನೊಬ್ಬ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದು, ಇನ್ನೂ ಶವ ಪತ್ತೆಯಾಗಿಲ್ಲ. ಈ ಘಟನೆ ನಂಜನಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ABOUT THE AUTHOR

...view details