ಕರ್ನಾಟಕ

karnataka

ETV Bharat / state

ಲಕ್ಷ್ಮಣ ತೀರ್ಥ ನದಿ ಪ್ರವಾಹಕ್ಕೆ ಸಿಲುಕಿ ಕಾಡೆಮ್ಮೆ ಸಾವು

ರಾಜ್ಯಕ್ಕೆ ಅಪ್ಪಳಿಸಿದ ಭೀಕರ ಜಲ ಪ್ರವಾಹ ಇಡೀ ನಾಡನ್ನೇ ತಲ್ಲಣಗೊಳಿಸಿದೆ. ಜನ-ಜಾನುವಾರುಗಳೆನ್ನದೆ ಸರ್ವವನ್ನೂ ಮುಳುಗಿಸಿದ ಈ ಪ್ರವಾಹ ಅಪಾರ ಹಾನಿಯನ್ನು ಉಂಟುಮಾಡಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬರುವ ಲಕ್ಷ್ಮಣ ತೀರ್ಥ ನದಿ ಉಕ್ಕಿ ಬಂದ ಪರಿಣಾಮ ಇಲ್ಲಿನ ಪ್ರಾಣಿಸಂಕುಲ ಸಂಕಷ್ಟಕ್ಕೆ ಸಿಲುಕಿದೆ. ಕಾಡೆಮ್ಮೆಯೊಂದು ಸಾವನ್ನಪ್ಪಿದೆ.

ಕಾಡೆಮ್ಮೆ ಸಾವು

By

Published : Aug 13, 2019, 12:29 PM IST

Updated : Aug 13, 2019, 12:35 PM IST

ಮೈಸೂರು: ಲಕ್ಷ್ಮಣ ತೀರ್ಥ ನದಿಯ ಪ್ರವಾಹಕ್ಕೆ ಸಿಲುಕಿ ಕಾಡೆಮ್ಮೆಯೊಂದು ಸಾವನ್ನಪ್ಪಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ನಡೆದಿದೆ.

ಕಳೆದ 1 ವಾರದಿಂದ ಸುರಿದ ದಾಖಲೆಯ ಮಳೆಗೆ ಜಲಾಶಯಗಳಲ್ಲಿ ಪ್ರವಾಹ ಉಂಟಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ದಾಖಲೆಯ 120 ಮಿ.ಮೀ. ಮಳೆಯಾಗಿದ್ದರಿಂದ ಲಕ್ಷ್ಮಣ ತೀರ್ಥ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಇದೆ.

ಈ ಪ್ರವಾಹದಲ್ಲಿ ಪ್ರಾಣ ಹಾನಿ, ಆಸ್ತಿ-ಪಾಸ್ತಿ ನಷ್ಟವಾಗಿದೆ. ಲಕ್ಷ್ಮಣ ತೀರ್ಥ ನದಿಯಲ್ಲಿಕಾಡೆಮ್ಮೆಯಸಾವನ್ನಪ್ಪಿದ್ದು, ಅದರ ಕಳೆಬರ ತೇಲಿ‌ಬಂದಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ.

Last Updated : Aug 13, 2019, 12:35 PM IST

ABOUT THE AUTHOR

...view details