ಕರ್ನಾಟಕ

karnataka

ETV Bharat / state

ಬೇಗೂರು ಅರಣ್ಯ ವ್ಯಾಪ್ತಿಯಲ್ಲಿ ಅನಾರೋಗ್ಯದಿಂದ ಗಂಡು ಹುಲಿ ಸಾವು - Death of a male tiger due to illness

ಅನಾರೋಗ್ಯದಿಂದ ಆಹಾರ ಸೇವಿಸಲಾಗದೆ ಗಂಡು ಹುಲಿಯೊಂದು ಮೃತಪಟ್ಟಿರುವ ಘಟನೆ ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ಎನ್ ಬೇಗೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ನಡೆದಿದೆ.

The death of the tiger
ಗಂಡು ಹುಲಿ ಸಾವು

By

Published : Jul 21, 2020, 6:51 PM IST

ಮೈಸೂರು:ಎಚ್.ಡಿ.ಕೋಟೆ ತಾಲೂಕಿನ ಎನ್ ಬೇಗೂರು ಅರಣ್ಯ ವಲಯದಲ್ಲಿ ಅನಾರೋಗ್ಯದಿಂದ ಗಂಡು ಹುಲಿಯೊಂದು ಮೃತಪಟ್ಟಿದೆ.

ಅರಣ್ಯ ವಲಯದ ಸೋರದಹಳ್ಳದ ಬಳಿ ಸುಮಾರು 4 ದಿನಗಳ ಹಿಂದೆ ಸುಮಾರು 7-8 ವರ್ಷದ ಗಂಡು ಹುಲಿ ಅನಾರೋಗ್ಯದಿಂದ ಆಹಾರ ಸೇವಿಸಲಾಗದೆ ಸಾವನ್ನಪ್ಪಿದೆ ಎಂದು ಅರಣ್ಯ ಅಧಿಕಾರಿಗಳು ಹಾಗೂ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಗಂಡು ಹುಲಿ ಸಾವು

ಹುಲಿಯ ಹೊಟ್ಟೆ ಖಾಲಿ ಇದೆ. ಅದು ಸತ್ತು 4 ದಿನ ಆಗಿದ್ದರಿಂದ ಮೃತ ದೇಹ ಡಿ ಕಂಪೋಸ್ ಆಗಿದೆ. ಹೀಗಾಗಿ, ಪ್ರಯೋಗಾಲಯದಲ್ಲಿ ಪರೀಕ್ಷೆ ಸಾಧ್ಯವಿಲ್ಲ ಎನ್ನಲಾಗಿದೆ. ಹುಲಿ ಅನಾರೋಗ್ಯದಿಂದ ಆಹಾರ ಸೇವಿಸಲಾಗದೆ ಸಾವನ್ನಪ್ಪಿರಬಹುದು ಎಂದು ಪಶು ವೈದ್ಯ ಡಾ.ನಾಗರಾಜ್ ತಿಳಿಸಿದ್ದಾರೆ.

ABOUT THE AUTHOR

...view details