ಮೈಸೂರು:ಪ್ರೀತಿಸಿ 2 ವರ್ಷದ ಹಿಂದೆ ಮದುವೆಯಾಗಿದ್ದ ಗೃಹಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಮೆಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ವರದಕ್ಷಿಣೆ ಕಿರುಕುಳ ಆರೋಪ... ಗೃಹಿಣಿ ಅನುಮಾನಾಸ್ಪದ ಸಾವು - mys news
ಎರಡು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ. ಪತಿ ಹಾಗೂ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಕಿರುಕುಳ ನೀಡ್ತಿದ್ದು, ಹಿಂಸೆ ತಾಳದೆ ಮೃಪಟ್ಟಿರುವ ಶಂಕೆ ವ್ಯಕ್ತವಾಗ್ತಿದೆ.
ಜಿಲ್ಲೆಯ ಮೆಲ್ಲಹಳ್ಳಿ ಗ್ರಾಮದ ಮಂಜುಳ (20) ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ. ಈಕೆ ಕಳೆದ 2 ವರ್ಷಗಳ ಹಿಂದೆ ಮೆಲ್ಲಹಳ್ಳಿ ಗ್ರಾಮದ ಹೇಮಂತ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದು, ಒಂದು ವರ್ಷದ ಗಂಡು ಮಗು ಇದೆ.
ಮಂಜುಳಾಗೆ ಪತಿ ಹಾಗೂ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಜತೆಗೆ ಮಂಜುಳ ಮೃತಪಟ್ಟಿರುವುದನ್ನ ಅವರ ಪೋಷಕರಿಗೂ ತಿಳಿಸದೆ ಅಂತ್ಯಕ್ರಿಯೆ ಮಾಡೋಕೆ ಕುಟುಂಬಸ್ಥರು ಮುಂದಾಗಿದ್ದರಂತೆ. ಸ್ಥಳಕ್ಕೆ ಪೊಲೀಸರು ಹೋಗುತ್ತಿದ್ದಂತೆ ಪತಿ ಹೇಮಂತ್ ಹಾಗೂ ಕುಟುಂಬಸ್ಥರು ಮೃತದೇಹ ಅಲ್ಲಿಯೇ ಬಿಟ್ಟು ಕಾಲ್ಕಿತ್ತಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ವರುಣ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.