ಕರ್ನಾಟಕ

karnataka

ETV Bharat / state

ಕಾಲುವೆಯಲ್ಲಿ ಯುವಕನ ಶವ ಪತ್ತೆ: ಕಲ್ಲಿನಿಂದ ಜಜ್ಜಿ ಕೊಲೆ ಶಂಕೆ - kempayyana hundi of T Narasipura talluk

ಟಿ ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದ ಸಮೀಪ ಕಾಲುವೆಯಲ್ಲಿ ತುಂಬಲ ಗ್ರಾಮದ ಯುವಕನ ಮೃತದೇಹ ಸಿಕ್ಕಿದೆ.

ಕೆಂಪಯ್ಯನಹುಂಡಿ ಗ್ರಾಮದ ಕಾಲುವೆ
ಕೆಂಪಯ್ಯನಹುಂಡಿ ಗ್ರಾಮದ ಕಾಲುವೆ

By

Published : Dec 7, 2022, 3:30 PM IST

Updated : Dec 7, 2022, 4:27 PM IST

ಮೈಸೂರು: ಕೊಲೆಯಾದ ರೀತಿ ಕಾಲುವೆಯಲ್ಲಿ ಯುವಕನೊಬ್ಬನ ಶವ ಪತ್ತೆಯಾದ ಘಟನೆ ಟಿ ನರಸೀಪುರ ತಾಲೂಕಿನ ಕೆಂಪಯ್ಯನ ಹುಂಡಿ ಬಳಿ ಬೆಳಕಿಗೆ ಬಂದಿದೆ. ಜಿಲ್ಲೆಯ ಟಿ ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದ ಸಮೀಪದ ಕಾಲುವೆಯಲ್ಲಿ ತುಂಬಲ ಗ್ರಾಮದ ಯುವಕ ಕಿರಣ್ (28) ಮೃತದೇಹ ಸಿಕ್ಕಿದೆ. ಈತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಟಿ ನರಸೀಪುರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕೆಂಪಯ್ಯನಹುಂಡಿ ಗ್ರಾಮದ ಕಾಲುವೆಯಲ್ಲಿ ಯುವಕ ಶವ ಪತ್ತೆ.

ಇದೇ ಕೆಂಪಯ್ಯನಹುಂಡಿಯ ರಸ್ತೆ ಪಕ್ಕದ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಇತ್ತೀಚೆಗೆ ಪತ್ತೆಯಾಗಿತ್ತು.

ಇದನ್ನೂ ಓದಿ:ಮದ್ಯದ ಅಮಲಿನಲ್ಲಿ ಸ್ನೇಹಿತರ ನಡುವೆ ಗಲಾಟೆ: ಓರ್ವನ ಕೊಲೆಯಲ್ಲಿ ಅಂತ್ಯ

Last Updated : Dec 7, 2022, 4:27 PM IST

ABOUT THE AUTHOR

...view details