ಮೈಸೂರು:ನಗರದ ರಿಂಗ್ ರಸ್ತೆಯಲ್ಲಿ ಪೊಲೀಸರು ನಡೆಸಿದ್ದ ಶೂಟೌಟ್ನಲ್ಲಿ ಸಾವನ್ನಪ್ಪಿದ್ದ ಸುಖ್ವಿಂದರ್ ಸಿಂಗ್ ಮೃತದೇಹವನ್ನು ಕುಟುಂಬಸ್ಥರಿಗೆ ನ್ಯಾಯಾಧೀಶರ ಸಮ್ಮುಖದಲ್ಲಿ ಹಸ್ತಾಂತರ ಮಾಡಲಾಯಿತು.
ಮೈಸೂರಲ್ಲಿ ಶೂಟೌಟ್ ಪ್ರಕರಣ: ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ - etv bharat
ಮೈಸೂರಿನ ರಿಂಗ್ ರಸ್ತೆಯಲ್ಲಿ ಪೊಲೀಸರು ನಡೆಸಿದ್ದ ಶೂಟೌಟ್ನಲ್ಲಿ ಸಾವನ್ನಪ್ಪಿದ್ದ ಸುಖ್ವಿಂದರ್ ಸಿಂಗ್ ಮೃತದೇಹವನ್ನು ಇಂದು ಕುಟುಂಬಸ್ಥರಿಗೆ ನ್ಯಾಯಾಧೀಶರ ಸಮ್ಮುಖದಲ್ಲಿ ಹಸ್ತಾಂತರ ಮಾಡಲಾಯಿತು.
ಇಂದು ಮಧ್ಯಾಹ್ನ ಮೂರು ಗಂಟೆಯವರೆಗೆ ಕೆ.ಆರ್. ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. 5ನೇ ತ್ವರಿತ ನ್ಯಾಯಾಲಯದ ನ್ಯಾಯಾಧೀಶರಾದ ಭೀಮಪ್ಪ ಸಮ್ಮುಖದಲ್ಲಿ ಡಾ. ಚಂದ್ರಕಾಂತ ಹಾಗೂ ಡಾ. ಆನಂದ ರಾಯಮನಿ ಮರಣೋತ್ತರ ಪರೀಕ್ಷೆ ನಡೆಸಿದರು. ಇನ್ನು ಮರಣೋತ್ತರ ಪರೀಕ್ಷೆ ಸಮಯದಲ್ಲಿ ಉಪ ತಹಸೀಲ್ದಾರ್ ಚಂದ್ರಕಾಂತ್ ಕೂಡ ಹಾಜರಿದ್ದರು.
ಪರೀಕ್ಷೆ ನಡೆದ ಬಳಿಕ ಮೃತದೇಹವನ್ನು ಮೈಸೂರಿನಿಂದ ಬೆಂಗಳೂರು ಏರ್ಪೋರ್ಟ್ ರಸ್ತೆಯ ಮೂಲಕ ಸಾಗಿಸಲಾಯಿತು. ನಂತರ ಅಲ್ಲಿಂದ ಬೆಂಗಳೂರು ಏರ್ಪೋರ್ಟ್ಗೆ, ನಂತರ ಪಂಜಾಬ್ ಏರ್ಪೋರ್ಟ್ಗೆ ರವಾನೆ ಮಾಡಲಾಗುತ್ತದೆ. ತದನಂತರ ಮೃತನ ಸ್ವಗ್ರಾಮಕ್ಕೆ ಶವವನ್ನು ಕೊಂಡೊಯ್ಯಲಾಗುತ್ತದೆ ಎಂದು ಹೇಳಲಾಗಿದೆ.