ಮೈಸೂರು : 18 ವರ್ಷದೊಳಗಿನವರು ಪೆಟ್ರೋಲ್ ಬಂಕ್ಗೆ ವಾಹನ ತಂದರೆ ಅವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಎಂದು ಡಿಸಿಪಿ ಗೀತಾ ಪ್ರಸನ್ನ ಸೂಚಿಸಿದ್ದಾರೆ.
'ಅಪ್ರಾಪ್ತರು ಬಂಕ್ಗೆ ವಾಹನ ತಂದರೆ ಪೊಲೀಸರಿಗೆ ಮಾಹಿತಿ ನೀಡಿ' - ಪೆಟ್ರೋಲ್ ಬಂಕ್ಗೆ ಡಿಸಿಪಿ ಗೀತಾಪ್ರಸನ್ನ ಸೂಚನೆ ಸುದ್ದಿ
18 ವರ್ಷದೊಳಗಿನವರು ಪೆಟ್ರೋಲ್ ಬಂಕ್ಗೆ ವಾಹನ ತಂದರೆ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಬೇಕು ಎಂದು ಡಿಸಿಪಿ ಗೀತಾಪ್ರಸನ್ನ ಆದೇಶ ಹೊರಡಿಸಿದ್ದಾರೆ.
!['ಅಪ್ರಾಪ್ತರು ಬಂಕ್ಗೆ ವಾಹನ ತಂದರೆ ಪೊಲೀಸರಿಗೆ ಮಾಹಿತಿ ನೀಡಿ' DCP Geetha Prasanna](https://etvbharatimages.akamaized.net/etvbharat/prod-images/768-512-10498511-276-10498511-1612436585613.jpg)
ಹೀಗಾಗಿ ಇನ್ನು ಮುಂದೆ ಅಪ್ರಾಪ್ತರನ್ನು ಪೆಟ್ರೋಲ್ ಬಂಕ್ಗೆ ಕಳಿಸುವ ಮುನ್ನ ಪೋಷಕರು ಎಚ್ಚರದಿಂದ ಇರಬೇಕಿದೆ. ಅಪ್ರಾಪ್ತರು ಬೈಕ್ ಮತ್ತು ಇತರೆ ವಾಹನವನ್ನು ತೆಗೆದುಕೊಂಡು ಬಂಕ್ಗೆ ಹೋದರೆ ಅಲ್ಲಿನ ಸಿಬ್ಬಂದಿ ಈ ವಿಷಯವನ್ನು ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಲಿದ್ದಾರೆ.
ಈ ಬಗ್ಗೆ ಮಾತನಾಡಿದ ಡಿಸಿಪಿ ಗೀತಾ ಪ್ರಸನ್ನ, "ಅಪ್ರಾಪ್ತರು ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಾಗ ಬಂಕ್ನಲ್ಲಿ ಇರುವ ಸಿಸಿಟಿವಿಯಲ್ಲಿ ವಾಹನದ ನೊಂದಣಿ ಸಂಖ್ಯೆ, ಅಪ್ರಾಪ್ತನ ಫೋಟೋ ದಾಖಲಾಗುತ್ತದೆ. ಈ ಸಂದರ್ಭದಲ್ಲಿ ಕುಟುಂಬವನ್ನು ಕರೆದು ಬುದ್ದಿವಾದ ಹೇಳುತ್ತೇವೆ. ಆಗಲೂ ಮಾತು ಕೇಳದಿದ್ದರೆ, ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು" ಎಂದರು.