ಕರ್ನಾಟಕ

karnataka

ETV Bharat / state

ಸ್ವತಃ ಫೀಲ್ಡ್​ಗೆ ಇಳಿದು ವಾಹನ ತಪಾಸಣೆ ಮಾಡಿದ ಡಿಸಿಪಿ ಡಾ.ಎ.ಎನ್.ಪ್ರಕಾಶಗೌಡ - karnataka latest corona news

ನಗರದ ಕೆ.ಆರ್.ವೃತ್ತದಲ್ಲಿ ಸ್ವತಃ ವಾಹನಗಳ ತಪಾಸಣೆ ಮಾಡಿದ ಡಿಸಿಪಿ ಡಾ.ಎ‌.ಎನ್‌.ಪ್ರಕಾಶಗೌಡ , ಪಾಸ್​ಗಳನ್ನು ದುರುಪಯೋಗ ಮಾಡಿಕೊಂಡು ಅನಗತ್ಯವಾಗಿ ತಿರುಗಾಡಬೇಡಿ. ನಿಯಮ ಉಲ್ಲಂಘನೆ ಮಾಡಿದರೆ ಕ್ರಿಮಿನಲ್ ಕೇಸ್ ದಾಖಲಾಗಲಿದೆ ಎಂದು ತಿಳಿ ಹೇಳಿದ್ದಾರೆ.

ಸ್ವತಃ ಫೀಲ್ಡ್​ಗೆ ಇಳಿದು ವಾಹನ ತಪಾಸಣೆ ಮಾಡಿದ ಡಿಸಿಪಿ ಡಾ.ಎ.ಎನ್.ಪ್ರಕಾಶಗೌಡ
ಸ್ವತಃ ಫೀಲ್ಡ್​ಗೆ ಇಳಿದು ವಾಹನ ತಪಾಸಣೆ ಮಾಡಿದ ಡಿಸಿಪಿ ಡಾ.ಎ.ಎನ್.ಪ್ರಕಾಶಗೌಡ

By

Published : Apr 17, 2020, 2:44 PM IST

ಮೈಸೂರು: ಮೈಸೂರಿನಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಅನಗತ್ಯವಾಗಿ ಸಂಚಾರ ಮಾಡುವ ವಾಹನ ಸವಾರರಿಗೆ ಡಾ.ಎ.ಎನ್‌.ಪ್ರಕಾಶಗೌಡ ಎಚ್ಚರಿಕೆ ನೀಡಿದ್ದಾರೆ.

ಎರಡನೇ ಬಾರಿಗೆ ಲಾಕ್ ಡೌನ್ ಮುಂದುವರಿಸುವುದರಿಂದ ಮೈಸೂರು ನಗರ ಪೊಲೀಸರು ತುಂಬ ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಅನವಶ್ಯಕವಾಗಿ ವಾಹನಗಳಲ್ಲಿ ಸಂಚಾರ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ನಗರದ ಕೆ.ಆರ್.ವೃತ್ತದಲ್ಲಿ ಸ್ವತಃ ವಾಹನಗಳ ತಪಾಸಣೆ ಮಾಡಿದ ಡಿಸಿಪಿ ಡಾ.ಎ‌.ಎನ್‌.ಪ್ರಕಾಶಗೌಡ , ಪಾಸ್​ಗಳನ್ನು ದುರುಪಯೋಗ ಮಾಡಿಕೊಂಡು ಅನಗತ್ಯವಾಗಿ ತಿರುಗಾಡಬೇಡಿ. ನಿಯಮ ಉಲ್ಲಂಘನೆ ಮಾಡಿದರೆ ಕ್ರಿಮಿನಲ್ ಕೇಸ್ ದಾಖಲಾಗಲಿದೆ ಎಂದು ತಿಳಿ ಹೇಳಿದ್ದಾರೆ.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಪಿ, ಕೋವಿಡ್-19 ಮಾರಕ ರೋಗದ ವಿರುದ್ಧ ಹೋರಾಟ ಮಾಡಲು ಸಾರ್ವಜನಿಕರು ಕೈ ಜೋಡಿಸಬೇಕು. ಅನಗತ್ಯವಾಗಿ ತಿರುಗಾಡಿ ತೊಂದರೆ ನೀಡಬಾರದು. ಮುಂದಿನ ದಿನಗಳಲ್ಲಿ ಪೊಲೀಸ್ ವ್ಯವಸ್ಥೆ ಮತ್ತಷ್ಟು ಬಿಗಿ ಮಾಡಲಾಗುವುದು ಎಂದರು‌.

ABOUT THE AUTHOR

...view details