ಮೈಸೂರು:ಜಿಲ್ಲಾಧಿಕಾರಿ ವಿರುದ್ಧ ಹುಣಸೂರು ಶಾಸಕ ಹೆಚ್.ಪಿ. ಮಂಜುನಾಥ್ ಅವರ ಆರೋಪಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪತ್ರದ ಮೂಲಕ ಉತ್ತರ ನೀಡಿದ್ದಾರೆ.
ಕೆಡಿಪಿ ಸಭೆ ನಡೆಸಿ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಹುಣಸೂರು ಶಾಸಕ ಹೆಚ್.ಪಿ ಮಂಜುನಾಥ್ 'ನಮಗೆ ಮಹಾರಾಣಿ ಬೇಡ, ಇಬ್ಬರು ಮಹಾರಾಣಿಗಳು ಮೈಸೂರಿನಲ್ಲಿದ್ದಾರೆ. ಕೆಲಸ ಮಾಡುವ ಜಿಲ್ಲಾಧಿಕಾರಿ ಬೇಕು' ಎಂದು ಡಿಸಿ ವಿರುದ್ಧ ಗರಂ ಆಗಿ ಹೇಳಿಕೆ ನೀಡಿದ್ದರು. ಇದಕ್ಕೆ ಪತ್ರದ ಮೂಲಕ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಕ್ಷೇತ್ರದ ಅಭಿವೃದ್ಧಿ ಕಾರ್ಯ ಕುರಿತ ಯಾವ ಪತ್ರಗಳು ತಮ್ಮಿಂದ ಬಂದಿಲ್ಲ. ನಿಮ್ಮ ವೈಯಕ್ತಿಕ ಹೆಸರಿನಲ್ಲಿ ಹಲವು ಅರ್ಜಿಗಳಿದ್ದು, ಅವು ಮೈಸೂರು ತಾಲೂಕಿನಲ್ಲಿ ಕೇರ್ಗಳಿ ಗ್ರಾಮದ ಹಲವು ಸರ್ವೆ ನಂಬರ್ ಗಳ ಭೂ ಪರಿವರ್ತನೆ ಅರ್ಜಿಗಳಾಗಿವೆ. ಆ ಅರ್ಜಿಗಳ ವಿಲೇವಾರಿ ಕಾನೂನು ಪ್ರಕಾರ ಮಾಡುತ್ತೇವೆ ಎಂದು ಉತ್ತರಿಸಿದ್ದಾರೆ.