ಕರ್ನಾಟಕ

karnataka

ETV Bharat / state

ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್​ ಆರೋಪಕ್ಕೆ ಡಿಸಿ ಸಿಂಧೂರಿ ಸ್ಪಷ್ಟನೆ ಹೀಗಿದೆ..

ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರ ರಾಜೀನಾಮೆ ಹಾಗೂ ಆರೋಪಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಸ್ಪಷ್ಟೀಕರಣ ನೀಡಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಶಿಲ್ಪಾ ನಾಗ್​ ಆರೋಪಕ್ಕೆ ಸಿಂಧೂರಿ ದಿಢೀರ್​ ಸ್ಪಷ್ಟನೆ
ಶಿಲ್ಪಾ ನಾಗ್​ ಆರೋಪಕ್ಕೆ ಸಿಂಧೂರಿ ದಿಢೀರ್​ ಸ್ಪಷ್ಟನೆ

By

Published : Jun 3, 2021, 8:03 PM IST

Updated : Jun 3, 2021, 9:28 PM IST

ಮೈಸೂರು:ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಆರೋಪದ ಜತೆ ರಾಜೀನಾಮೆ ನೀಡಿರುವುದಕ್ಕೆ ಜಿಲ್ಲಾಧಿಕಾರಿ ಡಿ ಸಿ ಸಿಂಧೂರಿ ಪ್ರತಿಕ್ರಿಯೆ ನೀಡಿದ್ದಾರೆ. ಶಿಲ್ಪಾನಾಗ್​ ಅವರ ಆರೋಪ ಎಲ್ಲವೂ ಸುಳ್ಳು, ನನ್ನಿಂದ ಯಾವುದೇ ಕಿರುಕುಳ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಶಿಲ್ಪಾ ನಾಗ್ ಹೇಳಿಕೆಯಲ್ಲಿನ ಆರೋಪಗಳು ಸತ್ಯಕ್ಕೆ ದೂರವಾದವು. ಕೋವಿಡ್​ ನಿಯಂತ್ರಿಸುವುದು ನನ್ನ ಕರ್ತವ್ಯ. ನನ್ನ ಎಲ್ಲಾ ಗಮನ ಮತ್ತು ಕಾರ್ಯಗಳು ಅ ಕಡೆಗೆ ಇದೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಆರೋಪಕ್ಕೆ ಸಿಂಧೂರಿ ಪ್ರತ್ಯುತ್ತರ

ವಾಸ್ತವವಾಗಿ ಶ್ರೀಮತಿ ಶಿಲ್ಪಾ ನಾಗ್ ಕೋವಿಡ್ ಪರಿಶೀಲನಾ ವಿಮರ್ಶೆಗಳಿಗೆ ಹಾಜರಾಗುವುದನ್ನು ನಿಲ್ಲಿಸಿದ್ದರು. ಮೈಸೂರು ಸಿಟಿ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಕೋವಿಡ್ ಸಾವುಗಳು ಮತ್ತು ಸಕ್ರಿಯ ಪ್ರಕರಣಗಳ ಕುರಿತು ಸಹಿ ಮಾಡದ ಮತ್ತು ವಿರೋಧಾತ್ಮಕ ಅಂಕಿ-ಅಂಶಗಳನ್ನು ಸಲ್ಲಿಸುತ್ತಿದ್ದರು. ಅದನ್ನು ಸರಿಪಡಿಸಲು ನಾನು ಆದೇಶಿಸಿದ್ದೆ. ಈ ನಿಟ್ಟಿನಲ್ಲಿ ಹೊರಡಿಸಲಾದ ಪತ್ರದ ಪ್ರತಿಯನ್ನು ಇಲ್ಲಿ ಲಗತ್ತಿಸಿದ್ದೇನೆ.

ಮೈಸೂರು ನಗರದಲ್ಲಿ ಸರ್ಕಾರಿ ಕೋವಿಡ್​ ಕೇರ್​ ಸೆಂಟರ್​ ಆರೈಕೆ ಕೇಂದ್ರಗಳನ್ನು ತೆರೆಯುವಂತೆ ಆದೇಶಿಸಿದ್ದೆ (ತಾಲೂಕು ಮತ್ತು ಗ್ರಾಮೀಣ ಪ್ರದೇಶಗಳು ಕಳೆದ 20 ದಿನಗಳಲ್ಲಿ 18 ಸಿಸಿಸಿ ತೆರೆಯಿತು). ಸನ್ನಿವೇಶಗಳಲ್ಲಿ ವೈಯಕ್ತಿಕವಾಗಿ ನಗರದಲ್ಲಿ ಇತ್ತೀಚಿಗೆ 3-ಸಿಸಿಸಿಗಳನ್ನು ತೆರೆಯಲಾಗಿದೆ. ಇವುಗಳನ್ನು ಉದ್ದೇಶಪೂರ್ವಕ ಕಿರುಕುಳವೆಂದು ಭಾವಿಸಲಾಗಿದೆ ಎಂದಿದ್ದಾರೆ.

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಡಿಸಿ ಸಿಂಧೂರಿ
ಶ್ರೀಮತಿ ಶಿಲ್ಪಾ ನಾಗ್ ಅವರಿಗೆ ಇಡೀ ಜಿಲ್ಲೆಯ ಖಾಸಗಿ ಕೈಗಾರಿಕೆಗಳು, ಕಾರ್ಖಾನೆಗಳು, ಐಟಿ ಕಂಪನಿಗಳಿಂದ ಬರುವ ಸಿಎಸ್ಆರ್ ಉಸ್ತುವಾರಿ ವಹಿಸಲಾಯಿತು. ನಂತರ ಅವರು ಮೈಸೂರು ನಗರದೊಳಗೆ ಕರ್ತವ್ಯ ನಿರತರಾಗಿದ್ರು ಎಂದು ನನಗೆ ತಿಳಿಸಲಾಯಿತು. ನಾನು ಜೂನ್ 1ರ ಒಳಗೆ ಸಿಎಸ್ಆರ್​ ಮೊತ್ತದ ಲೆಕ್ಕ ನೀಡುವಂತೆ ಸೂಚಿಸಿದ್ದೆ. ಆದರೆ ಈವರೆಗೂ ಆ ಮಾಹಿತಿ ಲಭ್ಯವಾಗಿಲ್ಲ ಎಂದು ರೋಹಿಣಿ ವಿವರಿಸಿದ್ದಾರೆ.
ತಾಲೂಕುಗಳು ಮತ್ತು ಗ್ರಾಮೀಣ ಪ್ರದೇಶಗಳಿಗೆ ಏನನ್ನೂ ನೀಡದ ಅವರ ಕ್ರಮ ಅನ್ಯಾಯ ಮತ್ತು ತಪ್ಪು. ಶ್ರೀಮತಿ ಶಿಲ್ಪಾ ನಾಗ್, ಐಎಎಸ್ ಸಿಎಸ್ಆರ್ ಖರ್ಚು ಮಾಡಿದ ಖಾತೆಗಳು ಇನ್ನೂ ಕಾಯುತ್ತಿವೆ. ಕಳೆದ 10 ದಿನಗಳಿಂದ ಶ್ರೀಮತಿ ಶಿಲ್ಪಾ ನಾಗ್​​​ ಅವರು ಜಿಲ್ಲಾಡಳಿತದ ವಿರುದ್ಧ ಮಾಧ್ಯಮಗಳಿಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬುದನ್ನು ಎಲ್ಲರೂ ಗಮನಿಸಬೇಕು ಎಂದು ಡಿಸಿ ಸಿಂಧೂರಿ ಉಲ್ಲೇಖಿಸಿದ್ದಾರೆ.
Last Updated : Jun 3, 2021, 9:28 PM IST

ABOUT THE AUTHOR

...view details