ಮೈಸೂರು: ಕೆಲಸ ಮಾಡಿದ ಎಲ್ಲಾ ಕಡೆ ಸದಾ ಸುದ್ದಿಯಾಗುವ ಈಗಿನ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ 37 ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ಅವರ ಕುಟುಂಬ ಹಾಗೂ ಅವರ ಕೆಲಸದ ಕಾರ್ಯ ದಕ್ಷತೆ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಕೊರೊನಾ ಜಾಗೃತಿ ಮೂಡಿಸುತ್ತಿರುವ ಡಿಸಿ ರೋಹಿಣಿ ಸಿಂಧೂರಿ ಮೂಲತಃ ಇಂದಿನ ತೆಲಂಗಾಣದಲ್ಲಿ 1984 ರಲ್ಲಿ ಜನಿಸಿದ ಇವರು, ಕೆಮಿಕಲ್ ಇಂಜಿನಿಯರ್ನಲ್ಲಿ ಪದವಿ ಪಡೆದು, 2009 ರಲ್ಲಿ ಐಎಎಸ್ ಅಧಿಕಾರಿಯಾದರು. ಮೊದಲು ತುಮಕೂರುನಲ್ಲಿ ಉಪ ವಿಭಾಗಾಧಿಕಾರಿಯಾಗಿ ನಂತರ ಮಂಡ್ಯ ಜಿಲ್ಲೆಯ ಇಒ ಆಗಿ, 2014 ರಲ್ಲಿ ಕೆಲಸ ಮಾಡಿದ್ದು, ಅಲ್ಲಿ ಪ್ರತಿ ಮನೆಗೂ ಶೌಚಾಲಯ ನಿರ್ಮಾಣ ಮಾಡಿ ರಾಷ್ಟ್ರ ಮಟ್ಟದ ಗಮನ ಸೆಳೆದಿದ್ದರು.
ನಂತರ ಹಾಸನದ ಜಿಲ್ಲಾಧಿಕಾರಿಯಾಗಿ ಯಶಸ್ವಿಯಾಗಿ ಮಹಾಮಸ್ತಕಾಭಿಷೇಕ ನಡೆಸಿದ್ದರು. ನಂತರ ಬೆಂಗಳೂರಿನ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು.
ಮಗನೊಂದಿಗೆ ಡಿಸಿ ರೋಹಿಣಿ ಸಿಂಧೂರಿ ಸಂಭ್ರಮ 8 ತಿಂಗಳಿಂದ ಮೈಸೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಕಳೆದ ವರ್ಷ ಸರಳವಾಗಿ ದಸರಾವನ್ನು ಯಶಸ್ವಿಯಾಗಿ ಆಚರಿಸಿ ಈಗ ಕೋವಿಡ್ ನಿರ್ವಹಣೆಯಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿ ದಿನವೂ ಒಂದಿಲ್ಲೊಂದು ಕೆಲಸಗಳಿಂದ ಸುದ್ದಿಯಾಗುತ್ತಿದ್ದಾರೆ.
ಪತಿ ಹಾಗೂ ಮಕ್ಕಳೊಂದಿಗೆ ಡಿಸಿ ರೋಹಿಣಿ ಸಿಂಧೂರಿ ಓದಿ:ಶಾಕಿಂಗ್: ಗಂಡಿಬಾಗಿಲು ಅನಾಥಾಶ್ರಮದಲ್ಲಿ ಕೊರೊನಾ ಸ್ಫೋಟ: 210 ಮಂದಿಗೆ ಪಾಸಿಟಿವ್!