ಕರ್ನಾಟಕ

karnataka

ETV Bharat / state

ಐತಿಹಾಸಿಕ ಕಪ್ಪಡಿ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧಿಸಿ ಡಿಸಿ ಆದೇಶ - ಶ್ರೀರಾಚಪ್ಪಾಜಿ ಅವರ ಜಾತ್ರಾ ಮಹೋತ್ಸವ

ಶ್ರೀ ಕಪ್ಪಡಿ ಕ್ಷೇತ್ರದ ಶ್ರೀ ರಾಚಪ್ಪಾಜಿ ಅವರ ಜಾತ್ರಾ ಮಹೋತ್ಸವದಲ್ಲಿ ನಡೆಯುವ ಪ್ರಾಣಿ ಬಲಿ ನಿಷೇಧಿಸಿ ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಅವರು ಆದೇಶ ಹೊರಡಿಸಿದ್ದಾರೆ.

ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ
ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ

By

Published : Mar 15, 2023, 9:44 PM IST

Updated : Mar 15, 2023, 10:10 PM IST

ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ಶ್ರೀ ದಯಾನಂದ ಸ್ವಾಮೀಜಿ

ಮೈಸೂರು :ಕೆ.ಆರ್ ನಗರ ತಾಲೂಕಿನ ಶ್ರೀ ಕಪ್ಪಡಿ ಕ್ಷೇತ್ರದ ಶ್ರೀ ರಾಚಪ್ಪಾಜಿ ಅವರ ಜಾತ್ರಾ ಮಹೋತ್ಸವ ನಡೆಯುವ ದೇವಸ್ಥಾನದ ಸುತ್ತಮುತ್ತ ಹಾಗೂ ಸಂಬಂಧಿಸಿದ ವ್ಯಾಪ್ತಿಯಲ್ಲಿ ಭಕ್ತಾದಿಗಳು, ಸಾರ್ವಜನಿಕರು ಯಾವುದೇ ಪ್ರಾಣಿ, ಪಕ್ಷಿ ಬಲಿ ನೀಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ. ಕೆ. ವಿ ರಾಜೇಂದ್ರ ಅವರು ಆದೇಶ ಹೊರಡಿಸಿದ್ದಾರೆ. ಶ್ರೀ ಕಪ್ಪಡಿಯಲ್ಲಿ ಶಿವರಾತ್ರಿಯಿಂದ ಯುಗಾದಿ ಹಬ್ಬದವರೆಗೆ ಶ್ರೀರಾಚಪ್ಪಾಜಿ ಜಾತ್ರೆ ನಡೆಯಲ್ಲಿದ್ದು, ಈ ಸಮಯದಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ಮತ್ತು ಬೇರೆ ಜಿಲ್ಲೆಗಳಿಂದ ಭಕ್ತಾಧಿಗಳು ಬಂದು ವಿಶೇಷ ಪೂಜೆ ಸಲ್ಲಿಸಿ, ದೇವಸ್ಥಾನದ ಗದ್ದಿಗೆಯ ಮುಂದಿನ ಜಾತ್ರೆ ಆವರಣದೊಳಗೆ ದೇವರ ಹೆಸರಿನಲ್ಲಿ ಕುರಿ, ಕೋಳಿ, ಆಡು, ಮೇಕೆ ಇತ್ಯಾದಿ ಪ್ರಾಣಿಗಳನ್ನು ಹರಕೆಯಾಗಿ ಪ್ರಾಣಿ ಬಲಿ ನೀಡುತ್ತಿದ್ದು, ಇದರಿಂದ ಪಕ್ಕದಲ್ಲಿರುವ ಕಾವೇರಿ ನದಿ ನೀರು ಕಲುಷಿತಗೊಂಡು ರೋಗ ರುಜಿನಗಳು ಹರಡುವ ಸಾಧ್ಯತೆ ಇದೆ.

ಐತಿಹಾಸಿಕ ಕಪ್ಪಡಿ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧಿಸಿ ಡಿಸಿ ಆದೇಶ

ಪರಿಸರ ಮಾಲಿನ್ಯವಾಗುವ ಸಾಧ್ಯತೆಯಿರುವುದರಿಂದ ಮತ್ತು ಭಕ್ತಾದಿಗಳ ಆರೋಗ್ಯ, ನೈರ್ಮಲ್ಯ, ಸಾರ್ವಜನಿಕ ಆರೋಗ್ಯದ ದೃಷ್ಠಿಯಿಂದ ಪ್ರಾಣಿಗಳ ಹತ್ಯೆ, ಬಲಿ ಮುಂತಾದ ಅಹಿತಕರ ಘಟನೆಗಳು/ಅವಘಡಗಳನ್ನು ತಡೆಗಟ್ಟಲು ಹಾಗೂ ಉಚ್ಛ ನ್ಯಾಯಾಲಯ ಹಾಗೂ ಇತರ ನ್ಯಾಯಾಲಯಗಳ ಆದೇಶಗಳನ್ನು ಪಾಲನೆ ಮಾಡಲು ಹಾಗೂ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ಶ್ರೀ ದಯಾನಂದ ಸ್ವಾಮೀಜಿ ಅವರು ಮನವಿ ಮಾಡಿದ್ದಾರೆ.

ಜಾತ್ರಾ ಮಹೋತ್ಸವದ ವೇಳೆ ಪ್ರಾಣಿ ಬಲಿ ನಿಷೇಧಿಸುವುದು ಸೂಕ್ತ : ಪ್ರಾಣಿ ಬಲಿಕೊಡುವುದನ್ನು ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ 1959 ಮತ್ತು ನಿಯಮ 1963 ರನ್ವಯ ನಿಷೇಧಿಸಲಾಗಿದೆ. ಗ್ರಾಮದ ವ್ಯಾಪ್ತಿಯಲ್ಲಿ ನೈರ್ಮಲ್ಯ ಕಾಪಾಡುವುದು ಮತ್ತು ಮುಂಜಾಗ್ರತಾ ಕ್ರಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕ ಹಿತದೃಷ್ಠಿಯಿಂದ ಕೆ. ಆರ್ ನಗರ ತಾಲೂಕು ಶ್ರೀಕಪ್ಪಡಿ ಕ್ಷೇತ್ರದ ಶ್ರೀರಾಚಪ್ಪಾಜಿ ಅವರ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಪ್ರಾಣಿ ಬಲಿ ನಿಷೇಧಿಸುವುದು ಸೂಕ್ತ ಎಂದು ತಿಳಿಸಲಾಗಿದೆ.

ನೈರ್ಮಲ್ಯ ಕಾಪಾಡುವುದು, ಮುಂಜಾಗ್ರತಾ ಕ್ರಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕ ಹಿತದೃಷ್ಠಿಯಿಂದ ಕೆ. ಆರ್​ ನಗರ ತಾಲೂಕು ಶ್ರೀಕಪ್ಪಡಿ ಕ್ಷೇತ್ರದ ಶ್ರೀರಾಚಪ್ಪಾಜಿ ಅವರ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಪ್ರಾಣಿ ಬಲಿ ನಿಷೇಧಿಸುವುದು ಸೂಕ್ತವೆಂದು ಮನವರಿಕೆಯಾಗಿರುವುದರಿಂದ, ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ 1959 ಮತ್ತು ನಿಯಮ 1961ರನ್ವಯ ದೇವಸ್ಥಾನಗಳಲ್ಲಿ ದೇವರ ಹೆಸರಿನಲ್ಲಿ ಪ್ರಾಣಿಗಳ ಬಲಿ ನೀಡುವುದು ಕಾನೂನಿಗೆ ವಿರೋಧವಾಗಿರುವುದರಿಂದ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ 1973ರ ಸಿಆರ್‌ಪಿಸಿ 144 (1) (3) ರಡಿಯಲ್ಲಿ ಪ್ರದತ್ತವಾಗಿರುವ ಅಧಿಕಾರ ಚಲಾಯಿಸಿ ಮಾ. 22 ರವರೆಗೆ ಕೆ. ಆರ್ ನಗರ ತಾಲ್ಲೂಕು ಶ್ರೀ ಕಪ್ಪಡಿ ಕ್ಷೇತ್ರದ ಶ್ರೀ ರಾಚಪ್ಪಾಜಿ ಅವರ ಜಾತ್ರಾ ಮಹೋತ್ಸವ ನಡೆಯುವ ದೇವಸ್ಥಾನದ ಸುತ್ತಮುತ್ತ ಹಾಗೂ ಸಂಬಂಧಿಸಿದ ವ್ಯಾಪ್ತಿಯಲ್ಲಿ ಭಕ್ತಾಧಿಗಳು ಸಾರ್ವಜನಿಕರು ಯಾವುದೇ ಪ್ರಾಣಿ ಬಲಿ ನೀಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಅವರು ಪ್ರಕಟಣೆ ಮೂಲಕ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ :ರಾಜಧಾನಿಯಲ್ಲಿ ಬೆಕ್ಕುಗಳ ಸಾವು: ಮೂಢನಂಬಿಕೆಗೆ ಬಲಿಯಾದವೇ ಮಾರ್ಜಾಲಗಳು?

Last Updated : Mar 15, 2023, 10:10 PM IST

ABOUT THE AUTHOR

...view details