ಕರ್ನಾಟಕ

karnataka

ETV Bharat / state

ಮೈಸೂರಿನಲ್ಲಿ ಬಾವಲಿ ಚೆಕ್ ‌ಪೋಸ್ಟ್​ಗೆ ಡಿಸಿ ಭೇಟಿ, ಪರಿಶೀಲನೆ - coronavirus latest news

ಹೆಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್ ‌ಪೋಸ್ಟ್‌ಗೆ ತೆರಳಿದ ಡಿಸಿ ಅಭಿರಾಮ್ ಜಿ. ಶಂಕರ್ ಪರಿಶೀಲನೆ ನಡೆಸಿದರು.

DC Abhiram G Shankar visit to Checkpost in Mysore
ಮೈಸೂರಿನಲ್ಲಿ ಬಾವಲಿ ಚೆಕ್‌ಪೋಸ್ಟ್​ಗೆ ಡಿಸಿ ಅಭಿರಾಮ್ ಭೇಟಿ

By

Published : May 11, 2020, 9:10 PM IST

ಮೈಸೂರು: ಹೊರ ರಾಜ್ಯದ ಪ್ರಯಾಣಿಕರ ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದರಿಂದ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅಂತಾರಾಜ್ಯ ಸಂಪರ್ಕ ಬೆಸೆಯುವ ಚೆಕ್ ‌ಪೋಸ್ಟ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

ಬಾವಲಿ ಚೆಕ್ ‌ಪೋಸ್ಟ್​ಗೆ ಡಿಸಿ ಅಭಿರಾಮ್ ಭೇಟಿ

ಕರ್ನಾಟಕ-ಕೇರಳ ರಾಜ್ಯದ ಗಡಿ ಭಾಗದಲ್ಲಿರುವ ಹೆಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್ ‌ಪೋಸ್ಟ್‌ಗೆ ತೆರಳಿದ ಡಿಸಿ ಅಭಿರಾಮ್ ಜಿ. ಶಂಕರ್, ಅಂತಾರಾಜ್ಯ ಪ್ರಯಾಣಿಕರನ್ನು ತಪಾಸಣೆ ಮಾಡುವ ಸಿಬ್ಬಂದಿ ಜತೆ ಚರ್ಚೆ ನಡೆಸಿದರು. ನಂತರ ಅಂತರಸಂತೆ ಬಳಿ ಇರುವ ಅಂತಾರಾಜ್ಯ ಪ್ರಯಾಣಿಕರ ಸ್ಕ್ರೀನಿಂಗ್ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಸಿಬ್ಬಂದಿಗೆ ಮಾರ್ಗದರ್ಶನ ನೀಡಿದರು.

ಇದಕ್ಕೂ ಮುನ್ನ ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲೂಕು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜಿಲ್ಲಾ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಜಿಪಂ ಸಿಇಒ ಪಿ.ಕೆ.ಮಿಶ್ರಾ ಹಾಗೂ ಅಧಿಕಾರಿಗಳು ಹಾಜರಿದ್ದರು.

ABOUT THE AUTHOR

...view details