ಕರ್ನಾಟಕ

karnataka

ETV Bharat / state

ಅರ್ಥಿಕ ಜನಗಣತಿಯ ಮೊಬೈಲ್ ಆಪ್ ಬಿಡುಗಡೆ ಮಾಡಿದ ಮೈಸೂರು ಡಿಸಿ - Economic Census Mobile App Release

ಮೈಸೂರು ಜಿಲ್ಲೆಯಲ್ಲಿ 7ನೇ ಆರ್ಥಿಕ ಜನಗಣತಿ ಕಾರ್ಯಕ್ರಮ ಜನವರಿ ತಿಂಗಳಲ್ಲಿ ಆರಂಭವಾಗಲಿದ್ದು, ಇದಕ್ಕಾಗಿ ಖಾಸಗಿ ಏಜೆಂಟ್ ಸಂಸ್ಥೆಗಳ ಮೂಲಕ ಗಣತಿ ನಡೆಯಲಿದ್ದು, ಈ ಗಣತಿಗಾಗಿ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಅಡಿ ಮೊಬೈಲ್ ಆಪ್ ಮೂಲಕ ಆರ್ಥಿಕ ಜನಗಣತಿ ಮಾಡಲು ಆಪ್ ಅನ್ನು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಬಿಡುಗಡೆ ಮಾಡಿದರು.

Economic Census Mobile App Releas
ಮೊಬೈಲ್ ಆಪ್ ಬಿಡುಗಡೆ

By

Published : Jan 6, 2020, 12:55 PM IST

ಮೈಸೂರು: ‌ಈ ಬಾರಿಯ ಅರ್ಥಿಕ ಜನಗಣತಿಯ ಕಾರ್ಯವನ್ನು ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿ ಮೊಬೈಲ್ ಆಪ್ ಮೂಲಕ ಸಂಗ್ರಹಿಸುವ ಸಲುವಾಗಿ ಮೊಬೈಲ್ ಆಪ್ ಅನ್ನು ಜಿಲ್ಲಾಧಿಕಾರಿಗಳು ಇಂದು ಬಿಡುಗಡೆ ಮಾಡಿದರು.

ಅರ್ಥಿಕ ಜನಗಣತಿಯ ಮೊಬೈಲ್ ಆಪ್ ಬಿಡುಗಡೆ

5 ವರ್ಷಕ್ಕೊಮ್ಮೆ ಹಲವು ಗಣತಿಗಳಂತೆ ಅರ್ಥಿಕ ಜನ ಗಣತಿಯು ನಡೆಯಲಿದ್ದು, ಕೇಂದ್ರ ಸರ್ಕಾರದ ಸಾಂಕಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆಯು ಕರ್ನಾಟಕ ರಾಜ್ಯಾದ್ಯಂತ 7ನೇ ಅರ್ಥಿಕ ಗಣತಿ ಕಾರ್ಯಕ್ರಮ ದೇಶಾದ್ಯಂತ ನವೆಂಬರ್ 2019 ರಿಂದ ಮಾರ್ಚ್ 2020ರ ವರೆಗೆ ನಡೆಯಲಿದೆ.

ಮೈಸೂರು ಜಿಲ್ಲೆಯಲ್ಲಿ 7ನೇ ಆರ್ಥಿಕ ಜನಗಣತಿ ಕಾರ್ಯಕ್ರಮವು ಜನವರಿ ತಿಂಗಳಲ್ಲಿ ಆರಂಭವಾಗಲಿದ್ದು, ಇದಕ್ಕಾಗಿ ಖಾಸಗಿ ಏಜೆಂಟ್ ಸಂಸ್ಥೆಗಳ ಮೂಲಕ ಗಣತಿ ನಡೆಯಲಿದ್ದು, ಈ ಗಣತಿಗಾಗಿ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಅಡಿ ಮೊಬೈಲ್ ಆಪ್ ಮೂಲಕ ಆರ್ಥಿಕ ಜನಗಣತಿ ಮಾಡಲು ಆಪ್ ಅನ್ನು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಬಿಡುಗಡೆ ಮಾಡಿದರು.

ಆರ್ಥಿಕ ಜನಗಣತಿ ಹೇಗೆ ನಡೆಯುತ್ತದೆ:7ನೇ ಆರ್ಥಿಕ ಜನಗಣತಿ ಪಟ್ಟಣ, ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಂತ ಉಪಯೋಗಕ್ಕಲ್ಲದೆ, ಕೃಷಿ ಮತ್ತು‌ ಕೃಷಿಯೇತರ ಸರಕುಗಳ ಉತ್ಪಾದನೆ, ವಿತರಣೆ, ಮಾರಾಟ, ಸೇವೆ ಮುಂತಾದ ಯಾವುದೇ ಆರ್ಥಿಕ ಚಟುವಟಿಕೆಗಳಲ್ಲಿ ಸಂಘಟಿತ ಮತ್ತು ಅಸಂಘಟಿತ ಆರ್ಥಿಕ ವಲಯದ ಎಲ್ಲ ಉದ್ಯಮಿಗಳ ಗಣತಿ ಕಾರ್ಯವನ್ನು ಕೈಗೊಳ್ಳಲಾಗುವುದು. ಈ ಹಿಂದೆ ಆರ್ಥಿಕ ಜನಗಣತಿ ನಡೆಸುವಾಗ ಲಿಖಿತ ದಾಖಲೆಯ ಮೂಲಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿತ್ತು. ಆದರೆ, ಈ ಬಾರಿ ಮೊಬೈಲ್ ಆಪ್ ಮ‌ೂಲಕ 7ನೇ ಆರ್ಥಿಕ ಜನಗಣತಿ ನಡೆಯಲಿದ್ದು, ಪ್ರತಿ 5 ವರ್ಷಕ್ಕೊಮ್ಮೆ ಈ ಆರ್ಥಿಕ ಗಣತಿ ನಡೆಯಲಿದೆ

ಗಣತಿಗೆ ಸಹಕರಿಸಿ:ಆರ್ಥಿಕ ಗಣತಿಗೆ ಬರುವ ಪ್ರತಿಯೊಬ್ಬ ಗಣತಿದಾರರು ಗುರುತಿನ ಚೀಟಿ ಧರಿಸಲು ಸೂಚಿಸಲಾಗಿದ್ದು, ಇದರ ಬಗ್ಗೆ ಯಾವುದೇ ಗೊಂದಲಗಳಿಗೆ ಸಿಲುಕದಂತೆ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಸಿಎಎ,‌ ಎನ್ಆರ್​ಸಿ ಹಾಗೂ ಜಿಎಸ್​ಟಿ ಹಿನ್ನೆಲೆಯಲ್ಲಿ ಆರ್ಥಿಕ ಗಣತಿ ನಡೆಯುತ್ತಿದೆ ಎಂಬ ಗೊಂದಲ ಉಂಟಾಗಬಹುದು. ಆದರೆ, ಈ ಆರ್ಥಿಕ ಗಣತಿಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು. ಕಳೆದ 30 ವರ್ಷದಿಂದ ಈ ಗಣತಿ ನಡೆಯುತ್ತಿದೆ. ಜನ ಯಾವುದೇ ಗೊಂದಲಗಳಿಗೆ ಒಳಗಾಗದಂತೆ ಸರಿಯಾಗಿ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.

ABOUT THE AUTHOR

...view details