ಮೈಸೂರು: ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿಯವರ ನಿಧನದ ಹಿನ್ನೆಲೆಯಲ್ಲಿ ಮಧ್ಯಾಹ್ನ ನಡೆಯಬೇಕಿದ್ದ ದಸರಾ ಸಭೆಗಳನ್ನು ಮುಂದೂಡಿ ಸಚಿವ ವಿ.ಸೋಮಣ್ಣ ಬೆಂಗಳೂರಿಗೆ ತೆರಳಿದರು.
ಅರುಣ್ ಜೇಟ್ಲಿ ನಿಧನ ಹಿನ್ನೆಲೆ ದಸರಾ ಸಭೆ ರದ್ದು - Dasara meeting
ಅರುಣ್ ಜೇಟ್ಲಿಯವರ ನಿಧನದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ದಸರಾ ಸಭೆಗಳನ್ನು ಸಚಿವ ವಿ.ಸೋಮಣ್ಣ ಮುಂದೂಡಿದ್ದಾರೆ.
ಅರುಣ್ ಜೇಟ್ಲಿಯವರ ನಿಧನ ಹಿನ್ನೆಲೆ ದಸರಾ ಸಭೆ ರದ್ದು
ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಸರಾ ಪೂರ್ವಭಾವಿ ಸಭೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸಚಿವ ವಿ.ಸೋಮಣ್ಣ ಅಧಿಕಾರಿಗಳ ಸಭೆ ಹಾಗೂ ಸಂಜೆ 5 ಗಂಟೆಗೆ ನಡೆಯಬೇಕಿದ್ದ ಪಕ್ಷದ ಕಾರ್ಯಕರ್ತರ ಸಭೆಯನ್ನು ಮೊಟಕುಗೊಳಿಸಿ ನಿಧನರಾದ ಅರುಣ್ ಜೇಟ್ಲಿಯವರಿಗೆ ಸಂತಾಪ ಸೂಚಿಸಿದರು.
ನಂತರ ಬೆಂಗಳೂರಿಗೆ ಹೊರಡುವ ಮುನ್ನ ಸೋಮವಾರ, ಮಂಗಳವಾರ ದಸರಾ ಕಾರ್ಯಕ್ರಮಗಳ ಅಂತಿಮ ರೂಪ ನೀಡುವುದಾಗಿ ಹೇಳಿ ಹೊರಟು ಹೋದರು.