ಕರ್ನಾಟಕ

karnataka

ETV Bharat / state

ಅ.12 ವರೆಗೆ ಮೈಸೂರಿನ ಪ್ರಮುಖ ಸ್ಥಳಗಳಲ್ಲಿ ದೀಪಾಲಂಕಾರ ವಿಸ್ತರಣೆ

ಅಂಬಾ ವಿಲಾಸ ಅರಮನೆ ಅದರ ಸುತ್ತಲಿನ ವೃತ್ತಗಳು ಮತ್ತು ರಸ್ತೆಗಳು, ಸಯ್ಯಾಜಿರಾವ್‌ ರಸ್ತೆ, ಡಿ.ದೇವರಾಜ ಅರಸ್ ರಸ್ತೆ ಸೇರಿ ಇನ್ನಿತರ ಪ್ರಮುಖ ರಸ್ತೆಗಳಲ್ಲಿ ಅಕ್ಟೋಬರ್ 12 ವರೆಗೆ ರಾತ್ರಿ 6.30ರಿಂದ 10.30ರವರೆಗೆ ವಿದ್ಯುತ್ ದೀಪಾಲಂಕಾರ ವೀಕ್ಷಣೆಗೆ ಸೆಸ್ಕ್ ಮತ್ತು ದಸರಾ ದೀಪಾಲಂಕಾರ ಉಪ ಸಮಿತಿ ತಿಳಿಸಿದೆ.

Dasara lighting extension in Mysore
ದೀಪಾಲಂಕಾರ ವಿಸ್ತರಣೆ

By

Published : Oct 11, 2022, 2:26 PM IST

ಮೈಸೂರು:ನಗರದ ಹೃದಯಭಾಗ ಹಾಗೂ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್‌ ದೀಪಾಲಂಕಾರವನ್ನು ಅ.12ರ ವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ದಸರಾ ದೀಪಾಲಂಕಾರ ಉಪ ಸಮಿತಿ ಮಾಹಿತಿ ನೀಡಿದೆ.

ನಾಡಹಬ್ಬ ದಸರಾ ಈ ಬಾರಿ ಅದ್ದೂರಿಯಾಗಿ ಆಚರಣೆ ಮಾಡುವ ನಿಟ್ಟಿನಲ್ಲಿ ದೀಪಾಲಂಕಾರಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ಅದರಂತೆ ಜನರು ದೀಪಾಲಂಕಾರಕ್ಕೆ ಮನಸೋತರು. ದಸರಾ ದೀಪಾಲಂಕಾರದ ಅವಧಿಯನ್ನು ವಿಜಯ ದಶಮಿವರೆಗೆ ನಿಗದಿಪಡಿಸಲಾಗಿತ್ತು. ಆದರೆ, ಉದ್ಯಮಿಗಳು, ಸಾರ್ವಜನಿಕರ ಅಪೇಕ್ಷೆಯಂತೆ ಅಕ್ಟೋಬರ್ 10 ರ ವರೆಗೆ ವಿಸ್ತರಿಸಲಾಯಿತು.

ಆದರೆ, ಇದೀಗ ಮತ್ತಷ್ಟು ದಿನ ದೀಪಾಲಂಕಾರ ಉಳಿಸಿಕೊಳ್ಳಬೇಕೆಂಬುದು ಜನಪ್ರತಿನಿಧಿಗಳು, ಸಾರ್ವಜನಿಕರು, ವ್ಯಾಪಾರಿಗಳ ಒತ್ತಾಸೆ ಆಗಿರುವ ಕಾರಣ ಸೆಸ್ಕ್‌ಗೆ ಹೆಚ್ಚುವರಿ ಆರ್ಥಿಕ ಹೊರೆಯಾದರೂ ನಗರದ ಹೃದಯ ಭಾಗ ಹಾಗೂ ಮುಖ್ಯರಸ್ತೆಗಳಲ್ಲಿ ಅ.12ರವರೆಗೆ ದೀಪಾಲಂಕಾರ ಅವಧಿ ವಿಸ್ತರಿಸಲಾಗಿದೆ ಎಂದು ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ ಹಾಗೂ ದಸರಾ ವಿದ್ಯುತ್‌ ದೀಪಾಲಂಕಾರ ಉಪಸಮಿತಿ ಅಧ್ಯಕ್ಷ ಟಿ.ರಮೇಶ್‌ ತಿಳಿಸಿದರು.

ನಗರದ ಪ್ರಮುಖ ಸ್ಥಳಗಳಾದ ಅಂಬಾ ವಿಲಾಸ ಅರಮನೆ ಅದರ ಸುತ್ತಲಿನ ವೃತ್ತಗಳು ಮತ್ತು ರಸ್ತೆಗಳು, ಸಯ್ಯಾಜಿರಾವ್‌ ರಸ್ತೆ, ಡಿ.ದೇವರಾಜ ಅರಸ್ ರಸ್ತೆ ಸೇರಿ ಇನ್ನಿತರ ಪ್ರಮುಖ ರಸ್ತೆಗಳಲ್ಲಿ ಅಕ್ಟೋಬರ್ 12 ವರೆಗೆ ರಾತ್ರಿ 6.30ರಿಂದ 10.30ರವರೆಗೆ ವಿದ್ಯುತ್ ದೀಪಾಲಂಕಾರ ವೀಕ್ಷಣೆಗೆ ಸೆಸ್ಕ್ ಮತ್ತು ದಸರಾ ದೀಪಾಲಂಕಾರ ಉಪ ಸಮಿತಿ ತಿಳಿಸಿದೆ.

ಉಪ ಸಮಿತಿ ವತಿಯಿಂದ ಅಭಿನಂದನೆ: ಈ ಬಾರಿ ದಸರಾ ವಿದ್ಯುತ್ ದೀಪಾಲಂಕಾರ ದಸರಾದ ಪ್ರಮುಖ ಆಕರ್ಷಣೀಯ ಕೇಂದ್ರ ಬಿಂದುವಾಗಿದ್ದು, ಮುಖ್ಯಮಂತ್ರಿಗಳು ಸೇರಿದಂತೆ ಹಲವು ಸಚಿವರು, ಶಾಸಕರು, ಉದ್ಯಮಿಗಳು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ದೀಪಾಲಂಕಾರ ಯಶಸ್ವಿಗೆ ಕಾರಣರಾದ ಎಲ್ಲರಿಗೂ ದೀಪಾಲಂಕಾರ ಉಪ ಸಮಿತಿ ವತಿಯಿಂದ ಧನ್ಯವಾದ ತಿಳಿಸಿದರು.

ಇದನ್ನೂ ಓದಿ:ವಿದ್ಯುತ್ ಬೆಳಕಿನಲ್ಲಿ ಝಗಮಗಿಸುತ್ತಿರುವ ಸಾಂಸ್ಕೃತಿಕ ನಗರಿ: ವಿಡಿಯೋ

ABOUT THE AUTHOR

...view details