ಕರ್ನಾಟಕ

karnataka

ETV Bharat / state

ರಿಲ್ಯಾಕ್ಸ್ ಮೂಡ್​​ನಲ್ಲಿ ಗಜಪಡೆ: 8 ಗಜಪಡೆಗಳ ತೂಕ ಎಷ್ಟು ಅಂತೀರಾ? - mysore dasara

ಗಜಪಯಣದ ಮೂಲಕ ಸಾಂಸ್ಕೃತಿಕ ನಗರಿಗೆ ಬಂದ 8 ಆನೆಗಳು ತಾತ್ಕಾಲಿಕವಾಗಿ ಅರಣ್ಯಭವನದಲ್ಲಿ ವಾಸ್ತವ್ಯ ಹೂಡಿದ್ದು, ರಿಲ್ಯಾಕ್ಸ್ ಮೂಡ್​ನಲ್ಲಿವೆ. ಈ ಎಂಟು ಆನೆಗಳ ತೂಕ ಎಷ್ಟು? ಎಂಬ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.

dasara jamboo elephants weight
ಅರಣ್ಯಭವನದಲ್ಲಿ ಆನೆಗಳ ವಾಸ್ತವ್ಯ

By

Published : Sep 14, 2021, 1:55 PM IST

ಮೈಸೂರು:ಗಜಪಯಣದ ಮೂಲಕ ನಾಡಹಬ್ಬ ದಸರಾಗೆ ಮುನ್ನುಡಿ ಬರೆದ ಗಜಪಡೆ ಲಾರಿ ಮೂಲಕ ವೀರನಹೊಸಳ್ಳಿಯಿಂದ ಅರಣ್ಯಭವನಕ್ಕೆ ಆಗಮಿಸಿದೆ. ಅಭಿಮನ್ಯು ನೇತೃತ್ವದ 8 ಗಜಪಡೆ ಅರಣ್ಯಭವನದಲ್ಲಿ ವಾಸ್ತವ್ಯ ಹೂಡಿವೆ.

ಅರಣ್ಯಭವನದಲ್ಲಿ ಗಜಪಡೆ ವಾಸ್ತವ್ಯ

ಈ 8 ಆನೆಗಳ ಜೊತೆಗೆ ಮಾವುತರು ಹಾಗೂ ಕಾವಾಡಿಗಳು 16 ಮಂದಿ ಬಂದಿದ್ದು, ಸ್ವಚ್ಛತೆ ಹಾಗೂ ಇತರ ಕೆಲಸ ನಿರ್ವಹಿಸಲು ಒಟ್ಟು 8 ಆನೆಗಳ ಜೊತೆ 50 ಮಂದಿ ಆಗಮಿಸಿದ್ದು, ಅವರಿಗೆ ಅರಮನೆ ಆವರಣದಲ್ಲಿ ತಾತ್ಕಾಲಿಕ ಶೆಡ್ ವ್ಯವಸ್ಥೆ ಮಾಡಲಾಗಿದೆ.

ಸೆಪ್ಟೆಂಬರ್ 16 ರಂದು ಬೆಳಿಗ್ಗೆ 6.30ಕ್ಕೆ ಅರಣ್ಯ ಭವನದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೆಳಗ್ಗೆ 8.30ಕ್ಕೆ ಅರಮನೆಯ ಮುಂಭಾಗದ ಜಯಮಾರ್ತಾಂಡ ದ್ವಾರದ ಮೂಲಕ ಪೂಜೆ ಸಲ್ಲಿಸಿ ಅರಮನೆಗೆ ಗಜಪಡೆ ಆಗಮಿಸಲಿದೆ.

ಅರಣ್ಯಭವನದಲ್ಲಿ ಆನೆಗಳ ವಾಸ್ತವ್ಯ

ಆನೆಗಳ ತೂಕ ಎಷ್ಟು?

ಮತ್ತಿಗೋಡು ಶಿಬಿರದ 56 ವರ್ಷದ ಅಭಿಮನ್ಯು ಆನೆಯ ತೂಕ 4720 ಕೆಜಿ, ದೊಡ್ಡ ಹರವೆ ಶಿಬಿರದ 34 ವರ್ಷದ ಅಶ್ವತ್ಥಾಮ ಆನೆಯ ತೂಕ 3630 ಕೆಜಿ, ದುಬಾರಿ ಶಿಬಿರದ ಆನೆ 58 ವರ್ಷದ ವಿಕ್ರಮ ಆನೆಯ ತೂಕ 3820 ಕೆಜಿ, ದುಬಾರೆ ಶಿಬರದ 43 ವರ್ಷದ ಧನಂಜಯ ಆನೆಯ ತೂಕ 4050 ಕೆಜಿ, ದುಬಾರೆ ಶಿಬಿರದ 44 ವರ್ಷದ ಹೆಣ್ಣಾನೆ ಕಾವೇರಿ ತೂಕ 3220 ಕೆಜಿ, ರಾಮಪುರ ಶಿಬಿರದ 48 ವರ್ಷದ ಹೆಣ್ಣಾನೆ ಚೈತ್ರಾ ತೂಕ 2600 ಕೆಜಿ, ರಾಮಪುರ ಶಿಬಿರದ 20 ವರ್ಷದ ಮತ್ತೊಂದು ಆನೆ ಲಕ್ಷ್ಮಿಯ ತೂಕ 2540 ಕೆಜಿ ಹಾಗೂ ಮತ್ತಿಗೋಡು ಶಿಬಿರದ 38 ವರ್ಷದ ಗೋಪಾಲಸ್ವಾಮಿ ಆನೆ 4420 ಕೆಜಿ ತೂಕವಿದೆ.

ವೀರನಹೊಸಳ್ಳಿಯಿಂದ ಅರಣ್ಯಭವನಕ್ಕೆ ಗಜಪಡೆ ಆಗಮನ
ಎಲ್ಲರ ಆಕರ್ಷಣೆ ಅಶ್ವತ್ಥಾಮ:

ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಗಜಪಯಣದ ಮೂಲಕ ಆಗಮಿಸಿದ ಅಶ್ವತ್ಥಾಮ 34 ವರ್ಷ ವಯಸ್ಸಿನ ದೊಡ್ಡ ಗಾತ್ರದ ಆನೆಯಾಗಿದ್ದು, ಅಭಿಮನ್ಯು ನಂತರ ಅಂಬಾರಿ‌ ಹೊರುವ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗಿದೆ.

ಆ ಉದ್ದೇಶದಿಂದ ಡಿಸಿಎಫ್ ಕರಿಕಾಳನ್ ಅವರ ವಿಶೇಷ ಆಸಕ್ತಿಯಿಂದ ಈ ಅಶ್ವತ್ಥಾಮ ಆನೆಯನ್ನು ಮೊದಲ ಬಾರಿಗೆ ದಸರಾಗೆ ಕರೆತರಲಾಗಿದೆ. ಸೋಮವಾರ ಗಜಪಯಣದ ಸಂದರ್ಭದಲ್ಲಿ ಈತನ ವರ್ತನೆ ಹೇಗಿರುತ್ತದೆ ಎಂಬ ಭಯ ಹಾಗೂ ಆತಂಕ ಅರಣ್ಯಧಿಕಾರಿಗಳಲ್ಲಿತ್ತು. ಆದರೆ, ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಗಜಪಯಣದಲ್ಲಿ ಅಶ್ವತ್ಥಾಮ ಶಾಂತಚಿತ್ತನಾಗಿ ನಿಂತಿದ್ದು, ಅರಣ್ಯಾಧಿಕಾರಿಗಳ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಈ ಅಶ್ವತ್ಥಾಮ ಆನೆ ದೊಡ್ಡ ಗಾತ್ರದ ಬೆನ್ನನ್ನು ಹೊಂದಿದ್ದು, 2.85 ಮೀಟರ್ ಎತ್ತರವಿದ್ದು, 3630 ಕೆಜಿ ತೂಕವಿದ್ದು, ಅಂಬಾರಿಯನ್ನು ಹೊರುವ ಹಾಗೂ ಆತನ ಬೆನ್ನಮೇಲೆ ಅಂಬಾರಿ ಕಟ್ಟುವ ಆಕಾರ ಹೊಂದಿದ್ದಾನೆ. ಹೀಗಾಗಿ ಅಭಿಮನ್ಯು ನಂತರ ಚಿನ್ನದ ಅಂಬಾರಿ ಹೊರುವ ಉತ್ತರಾಧಿಕಾರಿ ಈ ಅಶ್ವತ್ಥಾಮನೇ ಆಗಿದ್ದಾನೆ.

ABOUT THE AUTHOR

...view details