ಕರ್ನಾಟಕ

karnataka

ETV Bharat / state

ನಾಳೆ ದಸರಾ ಗೋಲ್ಡ್ ಕಾರ್ಡ್ ಬಿಡುಗಡೆ: ಖರೀದಿ ಹೇಗೆ? ಇಲ್ಲಿದೆ ಮಾಹಿತಿ.. - ಮೈಸೂರು ದಸರಾ 2023

ಮೈಸೂರು ದಸರಾ ನೋಡಲು ನಾಳೆ ಗೋಲ್ಡ್ ಕಾರ್ಡ್ ಸೌಲಭ್ಯ ಬಿಡುಗಡೆ ಮಾಡಲಾಗುತ್ತದೆ. ಆನ್​ಲೈನ್ ಮೂಲಕ ಖರೀದಿಸಬಹುದು.

ನಾಳೆ ದಸರಾ ಗೋಲ್ಡ್ ಕಾಡ್೯
ನಾಳೆ ದಸರಾ ಗೋಲ್ಡ್ ಕಾಡ್೯

By ETV Bharat Karnataka Team

Published : Oct 17, 2023, 10:57 PM IST

ಮೈಸೂರು:ನಾಡಹಬ್ಬ ಮೈಸೂರು ದಸರಾ 2023ರ ವೀಕ್ಷಣೆಗಾಗಿ ದೇಶ, ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಹಾಗು ಸಾರ್ವಜನಿಕರ ಅನುಕೂಲಕ್ಕಾಗಿ ಗೋಲ್ಡ್ ಕಾರ್ಡ್ ಸೌಲಭ್ಯವನ್ನು ಜಿಲ್ಲಾಡಳಿತ ಅ. 18ರಂದು (ನಾಳೆ) ಬೆಳಿಗ್ಗೆ 10ಕ್ಕೆ ಬಿಡುಗಡೆ ಮಾಡಲಿದ್ದು, ಆನ್​ಲೈನ್ ಮುಖಾಂತರ ಖರೀದಿ ಮಾಡಬಹುದಾಗಿದೆ.

ಗೋಲ್ಡ್ ಕಾರ್ಡ್ ಬೆಲೆ 6 ಸಾವಿರ ರೂ.ಗಳಾಗಿರುತ್ತದೆ. ಗೋಲ್ಡ್ ಕಾರ್ಡ್ ಲಭ್ಯತೆ ಅನುಗುಣವಾಗಿ ಆನ್‌ಲೈನ್​ ಮೂಲಕ ವೆಬ್​ಸೈಟ್​ನಲ್ಲಿ ಖರೀದಿಸಲು ಮಾತ್ರ ಅವಕಾಶವಿದೆ . ಒಂದು ಬಾರಿಗೆ ಗರಿಷ್ಠ ಎರಡು ಗೋಲ್ಡ್ ಕಾರ್ಡ್ ಖರೀದಿಸಬಹುದು. ಅದೇ ರೀತಿ ದಿನಾಂಕ ಅ.24ರಂದು ’ದಸರಾ ಜಂಬೂಸವಾರಿ’ ಮತ್ತು ಪಂಜಿನ ಕವಾಯಿತು ವೀಕ್ಷಣೆಗೆ ಟಿಕೆಟ್​ಗಳನ್ನು ಸಹ ಅ.18ರಂದು ಬೆಳಿಗ್ಗೆ 10ಕ್ಕೆ ಆನ್​ಲೈನ್​ ಮೂಲಕ ಬಿಡುಗಡೆ ಮಾಡಲಾಗುತ್ತದೆ. ಅರಮನೆ ಆವರಣದೊಳಗೆ ದಸರಾ ಜಂಬೂಸವಾರಿ ವೀಕ್ಷಣೆಗೆ ಪ್ರತಿ ಟಿಕೆಟ್ ಬೆಲೆ 3 ಸಾವಿರ ರೂ., ಮತ್ತು 2 ಸಾವಿರ ರೂ.ಗಳನ್ನು ನಿಗದಿಪಡಿಸಲಾಗಿದೆ.

ಬನ್ನಿಮಂಟಪದಲ್ಲಿ ಪಂಜಿನ ಕವಾಯಿತು ವೀಕ್ಷಣೆಗೆ ಪ್ರತಿ ಟಿಕೆಟಿನ ಬೆಲೆ 500 ರೂ. ನಿಗದಿಪಡಿಸಲಾಗಿದೆ. ಟಿಕೆಟ್​ ಮತ್ತು ಗೋಲ್ಡ್ ಕಾರ್ಡ್ ಖರೀದಿಗಾಗಿ mysoredasara.gov.in ವೆಬ್​ಸೈಟ್​ನಲ್ಲಿ ಸಂಪರ್ಕಿಸಬಹುದು. ಆನ್​ಲೈನ್​ ಮೂಲಕ ಗೋಲ್ಡ್ ಕಾರ್ಡ್, ಟಿಕೆಟ್​ ಖರೀದಿಸಿದ ನಂತರ, ಖರೀದಿಸಿದವರಿಗೆ ಗೋಲ್ಡ್ ಕಾರ್ಡ್ ಟಿಕೆಟ್​​ ಸ್ವೀಕರಿಸುವ ಸ್ಥಳ, ದಿನಾಂಕ, ಸಮಯ ಹಾಗು ಇನ್ನಿತರೆ ಮಾಹಿತಿಗಳು ಅವರ ಮೊಬೈಲ್‌ಗೆ ಎಸ್​ಎಂಎಸ್ ಮೂಲಕ ಮತ್ತು ಇ-ಮೇಲ್ ಐಡಿಗೆ ಮಾಹಿತಿ ಕಳುಹಿಸಲಾಗುತ್ತದೆ.

ಅದಕ್ಕನುಸಾರವಾಗಿ ಖರೀದಿಸಿದವರು ಅವರ ಭಾವಚಿತ್ರವಿರುವ ಯಾವುದಾದರೂ ಒಂದು ಪೋಟೋ ಐಡಿ ಹಾಜರುಪಡಿಸಿ ಗೋಲ್ಡ್ ಕಾರ್ಡ್ ಟಿಕೆಟ್ ಪಡೆದುಕೊಳ್ಳಬಹುದಾಗಿದೆ. ಆನ್ಲೈನ್ ಹೊರತುಪಡಿಸಿ ಇತರೆ ಯಾವುದೇ ರೀತಿಯಲ್ಲಿ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್​ ಮಾರಾಟ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:ಮೈಸೂರು ದಸರಾ ವೈಭವದ ಮಧ್ಯೆ 'F0R REGN' ಫಸ್ಟ್​ ಲುಕ್​ ಅನಾವರಣ

ABOUT THE AUTHOR

...view details