ಮೈಸೂರು:ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಗೆ ನಾಲ್ಕೇ ದಿನ ಬಾಕಿ ಇದ್ದು, ಇದಕ್ಕಾಗಿ ಅರಮನೆ ಅಂಗಳದಲ್ಲಿ ಗಜಪಡೆಯಿಂದ ರಿಹರ್ಸಲ್ ನಡೆಸಲಾಯಿತು.
ಜಂಬೂಸವಾರಿ ಮೆರವಣಿಗೆ ದಿನ ಆನೆಗಳಿಗೆ ಸಾಥ್ ನೀಡಲಿರುವ ಸಿಎಆರ್ ಮತ್ತು ಅಶ್ವಾರೋಹಿ ಪೊಲೀಸರಿಂದ ತಾಲೀಮು ನಡೆಸಲಾಯಿತು. ಜಂಬೂಸವಾರಿ ಮೆರವಣಿಗೆ ದಿನ ಅಭಿಮನ್ಯು ಹೆಗಲ ಮೇಲೇರುವ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗುವ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಯಧುವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರು ಪುಷ್ಪಾರ್ಚನೆ ಮಾಡಲಿದ್ದಾರೆ.