ಮೈಸೂರು :ಕಾಲಿಗೆ ಕಟ್ಟಲಾಗಿದ್ದ ಸರಪಳಿಯನ್ನು ಕಿತ್ತುಕೊಂಡಿರುವ ಅರಮನೆಯ ಜಮಿನಿ ಎಂಬ ಆನೆ ರಂಪಾಟ ನಡೆಸಿದೆ. ಪರಿಣಾಮ ಕೆಲಕಾಲ ಮಾವುತರೇ ಬೆಚ್ಚಿಬಿದ್ದಿದ್ದಾರೆ.
ಸರಪಳಿ ಕಿತ್ತುಕೊಂಡ ಹೆಣ್ಣಾನೆ ದಸರಾಗೆ ಬಂದಿರುವ ಆನೆಗಳಿಗೆ ಕೀಟಲೆ ಮಾಡಲು ಮುಂದಾಗಿ ಅತ್ತಿಂದಿತ್ತ ಓಡಾಡಿದೆ. ಇದರಿಂದ ಅರಮನೆ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.