ಕರ್ನಾಟಕ

karnataka

ETV Bharat / state

ಶ್ರೀರಂಗಪಟ್ಟಣ ದಸರಾ: ಅಂಬಾರಿ ಹೊರಲಿರುವ ಮಹೇಂದ್ರ - mandya district administration

ಮಹಾರಾಜರು ಶ್ರೀರಂಗಪಟ್ಟಣದಲ್ಲಿ ದಸರಾವನ್ನು ಹಿಂದೆ ಸಾಂಪ್ರದಾಯಿಕವಾಗಿ ಆಚರಣೆ ಮಾಡುತ್ತಿದ್ದ ಪ್ರತೀಕವಾಗಿ ಶ್ರೀರಂಗಪಟ್ಟಣದಲ್ಲಿ ಮಂಡ್ಯ ಜಿಲ್ಲಾಡಳಿತ ಸಾಂಪ್ರದಾಯಿಕ ದಸರಾವನ್ನು ನಾಳೆ ಆಚರಣೆ ಮಾಡಲಿದೆ.

ಮಹೇಂದ್ರ
ಮಹೇಂದ್ರ

By

Published : Sep 27, 2022, 6:37 PM IST

ಮೈಸೂರು: ನಾಳೆ ಶ್ರೀರಂಗಪಟ್ಟಣದಲ್ಲಿ ನಡೆಯಲಿರುವ ಸಾಂಪ್ರದಾಯಿಕ ದಸರಾದಲ್ಲಿ ಮಹೇಂದ್ರ ನೇತೃತ್ವದ 3 ಆನೆಗಳು ಭಾಗವಹಿಸಲಿದ್ದು, ಇಂದು 3 ಆನೆಗಳು ಶ್ರೀರಂಗಪಟ್ಟಣಕ್ಕೆ ತೆರಳಿದವು.

ಮಹಾರಾಜರು ಶ್ರೀರಂಗಪಟ್ಟಣದಲ್ಲಿ ದಸರಾವನ್ನು ಹಿಂದೆ ಸಾಂಪ್ರದಾಯಿಕವಾಗಿ ಆಚರಣೆ ಮಾಡುತ್ತಿದ್ದ ಪ್ರತೀಕವಾಗಿ ಶ್ರೀರಂಗಪಟ್ಟಣದಲ್ಲಿ ಮಂಡ್ಯ ಜಿಲ್ಲಾಡಳಿತ ಸಾಂಪ್ರದಾಯಿಕ ದಸರಾವನ್ನು ನಾಳೆ ಆಚರಣೆ ಮಾಡಲಿದೆ. ನಾಳೆ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಜಂಬೂಸವಾರಿಯಲ್ಲಿ ಭಾಗವಹಿಸಲು ಮಹೇಂದ್ರ, ಕಾವೇರಿ ಮತ್ತು ವಿಜಯ ಆನೆಗಳು ಶ್ರೀರಂಗಪಟ್ಟಣಕ್ಕೆ ರವಾನಿಸಲಾಗಿದೆ.

ನಾಳೆ ಶ್ರೀರಂಗಪಟ್ಟಣದಲ್ಲಿ 280 ಕೆಜಿ ತೂಕದ ಮರದ ಅಂಬಾರಿಯಲ್ಲಿ ದೇವಿ ವಿಗ್ರಹವನ್ನು ಇಟ್ಟು ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಗುವುದು. ಇದಕ್ಕಾಗಿ ಶ್ರೀರಂಗಪಟ್ಟಣದಲ್ಲಿ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಇಂದು 3 ಆನೆಗಳನ್ನು ಲಾರಿ ಮೂಲಕ ತೆಗೆದುಕೊಂಡು ಹೋಗಲಾಯಿತು.

ಆನೆಗಳ ಜೊತೆಗೆ ಮಾವುತರು, ಕಾವಾಡಿಗರು, ಅರಣ್ಯ ಸಿಬ್ಬಂದಿ ಮತ್ತು ವೈದ್ಯರ ತಂಡ ಹೋಗಿದ್ದು, ಶ್ರೀರಂಗಪಟ್ಟಣ ಜಂಬೂಸವಾರಿಯ ಸಂದರ್ಭದಲ್ಲಿ ಭಾರಿ ಶಬ್ದ ಬರುವ ಪಟಾಕಿ ಸಿಡಿಸದಂತೆ ಎಚ್ಚರಿಕೆ ನೀಡಲಾಗಿದೆ.

ಓದಿ:ಮೈಸೂರು ದಸರಾ.. ಸಾಂಪ್ರದಾಯಿಕ ಕುಸ್ತಿಗೆ ಚಾಲನೆ

ABOUT THE AUTHOR

...view details