ಮೈಸೂರು: ನಾಗರಹೊಳೆಯ ದಮ್ಮನಕಟ್ಟೆ ಸಫಾರಿ ಕೇಂದ್ರವನ್ನು ಕಾಕನಕೋಟೆ ಸಫಾರಿ ಕೇಂದ್ರ ಎಂದು ಮರುನಾಮಕರಣ ಮಾಡಲಾಗಿದ್ದು, ಸಫಾರಿಗಳಿಗೆ ಆನ್ಲೈನ್ ಬುಕ್ಕಿಂಗ್ ಸೇವೆ ಪ್ರಾರಂಭಿಸಲಾಗಿದೆ.
ದಮ್ಮನಕಟ್ಟೆ ಸಫಾರಿ ಕೇಂದ್ರ ಇನ್ಮುಂದೆ 'ಕಾಕನಕೋಟೆ'! - Latest News For nagarahole safari
ನಾಗರಹೊಳೆಯ ದಮ್ಮನಕಟ್ಟೆ ಸಫಾರಿ ಕೇಂದ್ರವನ್ನು ಕಾಕನಕೋಟೆ ಸಫಾರಿ ಕೇಂದ್ರ ಎಂದು ಮರುನಾಮಕರಣ ಮಾಡಲಾಗಿದ್ದು, ಸಫಾರಿಗಳಿಗೆ ಆನ್ಲೈನ್ ಬುಕ್ಕಿಂಗ್ ಸೇವೆ ಪ್ರಾರಂಭಿಸಲಾಗಿದೆ.
ದಮ್ಮನಕಟ್ಟೆ ಸಫಾರಿ ಕೇಂದ್ರ ಇನ್ನು ಮುಂದೆ "ಕಾಕನಕೋಟೆ"
ವನ್ಯಜೀವಿಗಳನ್ನು ವೀಕ್ಷಿಸಲು ದೇಶ-ವಿದೇಶಗಳಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರವಾಸಿಗರು ಬರುತ್ತಾರೆ. ಅಷ್ಟು ಪ್ರಸಿದ್ಧಿ ಹೊಂದಿರುವ ಈ ನಾಗರಹೊಳೆಯಲ್ಲಿ ಹುಲಿ ಮತ್ತು ಕಪ್ಪು ಚಿರತೆಯ ಫೋಟೋ ತೆಗೆಯಲು ಜನರು ಕಾತುರರಾಗಿರುತ್ತಾರೆ. ಸಫಾರಿ ಮಾಡುವ ಜನರಿಗೆ ಆನೆಗಳು, ಚಿರತೆ, ಹುಲಿ, ಕಾಡೆಮ್ಮೆ ಮತ್ತು ಜಿಂಕೆಗಳು ಸೇರಿದಂತೆ ವಿಶೇಷವಾದ ಪಕ್ಷಿಗಳು ಸಹ ನೋಡಲು ಸಿಗುವಂತಹ ಈ ಸುಂದರ ದಮ್ಮನಕಟ್ಟೆಯ ಕೇಂದ್ರಕ್ಕೆ ಇದೀಗ ಕಾಕನಕೋಟೆ ಸಫಾರಿ ಕೇಂದ್ರ ಎಂಬ ಹೊಸ ಹೆಸರು ನಾಮಕರಣ ಮಾಡಲಾಗಿದೆ.