ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ವಾಯು ಮಾಲಿನ್ಯ ತಪ್ಪಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಸೈಕಲ್ ಫಾರ್ ಚೇಂಜ್ ಎಂಬ ಕಾರ್ಯಕ್ರಮದಡಿ ವಿಶೇಷ ಸೈಕಲ್ ಟ್ರ್ಯಾಕ್ (ವಿಶೇಷ ಸೈಕಲ್ ಪಥ) ನಿರ್ಮಾಣವಾಗುತ್ತಿದೆ.
ವಾಯು ಮಾಲಿನ್ಯ ತಡೆಗೆ ಸಾಂಸ್ಕೃತಿಕ ನಗರಿಯಲ್ಲಿ 'ಸೈಕಲ್ ಫಾರ್ ಚೇಂಜ್'
ಸೈಕ್ಲಿಸ್ಟ್ಗಳಿಗಾಗಿ ಮತ್ತು ವಾಯು ಮಾಲಿನ್ಯ ತಡೆಯುವ ಉದ್ದೇಶದಿಂದ ಸೈಕಲ್ ಫಾರ್ ಚೇಂಜ್ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಅದಕ್ಕಾಗಿ ಮೈಸೂರಿನಲ್ಲಿ ವಿಶೇಷ ಪಥ ನಿರ್ಮಾಣ ಮಾಡಲಾಗುತ್ತಿದೆ.
'ಸೈಕಲ್ ಫಾರ್ ಚೇಂಜ್' ಯೋಜನೆ
ಈ ಕಾರ್ಯಕ್ರಮದಡಿ ದೇಶದ 95 ನಗರಗಳ ಪೈಕಿ ಮೈಸೂರು ಸಹ ಒಂದು. ನಗರದ ಕುಕ್ಕರಹಳ್ಳಿ ರಸ್ತೆ, ವಿಶ್ವಮಾನವ ಡಬಲ್ ರಸ್ತೆ ಮತ್ತು ಮುಡಾ ರಸ್ತೆಗಳು ಸೇರಿದಂತೆ 10 ಕಿ.ಮೀ. ಸೈಕಲ್ ಪಥ ನಿರ್ಮಿಸಲಾಗುತ್ತಿದೆ.
ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಮಹಾನಗರ ಪಾಲಿಕೆ ಕೂಡ ಸಹಭಾಗಿತ್ವ ಹೊಂದಿದೆ. ದ್ವಿಪಥ ರಸ್ತೆಗಳಲ್ಲಿ 4-6 ತಿಂಗಳೊಳಗೆ ಈ ಯೋಜನೆ ಪೂರ್ಣಗೊಳ್ಳಲಿದೆ. ಈ ಹಿಂದೆ ಟ್ರಿನ್ ಟ್ರಿನ್ ಯೋಜನೆ ಜಾರಿಗೆ ತರಲಾಗಿತ್ತು ಎಂದು ಪಾಲಿಕೆಯ ಆಯುಕ್ತ ಗುರುದತ್ ಹೆಗಡೆ ತಿಳಿಸಿದರು.