ಕರ್ನಾಟಕ

karnataka

ETV Bharat / state

ಸಾಮಾಜಿಕ ಅಂತರ ಮರೆತು ಗುಂಪುಗಟ್ಟಿ ವ್ಯಾಪಾರ ವಹಿವಾಟು ನಡೆಸಿದ ಸಾಂಸ್ಕೃತಿಕ ನಗರಿ ಜನ!

ದೇವರಾಜ ಮಾರುಕಟ್ಟೆಯ ಹೂವಿನ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಅನುವು ಮಾಡಿಕೊಡಲಾಗಿದ್ದು, ಗ್ರಾಹಕರು ಖರೀದಿಗಾಗಿ ಮುಗಿ ಬಿದ್ದಿದ್ದಾರೆ.

Cultural city people who forget the social gap and trade in groups
ಸಾಮಾಜಿಕ ಅಂತರ ಮರೆತು ಗುಂಪುಗಟ್ಟಿ ವಹಿವಾಟು ನಡೆಸಿದ ಸಾಸಂಕೃತಿಕ ನಗರಿ ಜನ

By

Published : Apr 30, 2020, 4:03 PM IST

ಮೈಸೂರು:ಕೊರೊನಾ ಹಾವಳಿಗೆ ಸಿಲುಕಿ ರೆಡ್​ ಝೋನ್​ನಲ್ಲಿರುವ ಸಾಂಸ್ಕೃತಿಕ ನಗರಿಯಲ್ಲಿ ಜನ ಇನ್ನೂ ಎಚ್ಚೆತ್ತಿಕೊಂಡಂತೆ ಕಾಣುತ್ತಿಲ್ಲ. ದೇವರಾಜ ಮಾರುಕಟ್ಟೆಯಲ್ಲಿ ಹೂ ಮಾರಾಟ ಹಾಗೂ ಖರೀದಿಗಾಗಿ ಸಾರ್ವಜನಿಕರು ಸಾಮಾಜಿಕ ಅಂತರವನ್ನೇ ಮರೆತು ಮುಗಿಬಿದ್ದ ಘಟನೆ ನಡೆದಿದೆ.

ಮೈಸೂರಿನಲ್ಲಿ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಜನರು ಮನೆಯಿಂದ ಆಚೆ ಬರುವುದು, ಸಾಮಾಜಿಕ ಅಂತರವನ್ನೇ ಮರೆತು ಗುಂಪು ಗುಂಪಾಗಿ ಸೇರುವುದು ಸಾಮಾನ್ಯವಾಗಿದೆ. ದೇವರಾಜ ಮಾರುಕಟ್ಟೆಯ ಹೂವಿನ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಅನುವು ಮಾಡಿಕೊಡಲಾಗಿದ್ದು, ಗ್ರಾಹಕರು ಖರೀದಿಗಾಗಿ ಮುಗಿ ಬಿದ್ದಿದ್ದಾರೆ. ಜೊತೆಗೆ ವ್ಯಾಪಾರಿಗಳು ಕೂಡ ಮಾಸ್ಕ್ ಹಾಕದೇ ವ್ಯಾಪಾರಿದಲ್ಲಿ ತೊಡಗಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೊನಾ ಮುಕ್ತ ಮೈಸೂರು ಮಾಡಲು ಶ್ರಮಿಸೋಣ ಎಂದು ಸಾಕಷ್ಟು ಮನವಿ ಮಾಡಿದರೂ ಕೂಡ ಜನರು ನಿರ್ಲಕ್ಷ್ಯ ತೋರುತ್ತಿರುವುದು ವಿಷಾದಕರ.

ABOUT THE AUTHOR

...view details