ಕರ್ನಾಟಕ

karnataka

ETV Bharat / state

ನ್ಯಾಯಾಲಯಗಳ ಆದೇಶದಿಂದ ರಾಜ್ಯಕ್ಕೆ ಆಕ್ಸಿಜನ್ ಸಿಕ್ಕಿದೆ; ಧೃವನಾರಾಯಣ್

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಕೊರೊನಾ ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರ್. ಧೃವನಾರಾಯಣ್ ಕಿಡಿಕಾರಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್
ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್

By

Published : May 14, 2021, 5:14 PM IST

ಮೈಸೂರು: ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಆದೇಶದಿಂದ ರಾಜ್ಯಕ್ಕೆ ಆಕ್ಸಿಜನ್ ಸಿಕ್ಕಿದೆ, ನ್ಯಾಯ ಸಿಕ್ಕಿದೆ‌‌. ನ್ಯಾಯಾಲಯಕ್ಕೆ ಸಿ.ಟಿ. ರವಿ ಕೃತಜ್ಞತೆ ಸಲ್ಲಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧೃವನಾರಾಯಣ್ ಹೇಳಿದ್ದಾರೆ.

ಬಸವ ಜಯಂತಿ ಹಿನ್ನೆಲೆ ಅಗ್ರಹಾರ ವೃತ್ತದ ಬಳಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ‌ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಕ್ಸಿಜನ್ ವಿಚಾರವಾಗಿ ರಾಜ್ಯಕ್ಕೆ ನ್ಯಾಯ ಸಿಕ್ಕಿರುವುದು ನ್ಯಾಯಾಲಯದಿಂದ. ಇದರ ಬಗ್ಗೆ ತಿಳಿಯದ ಸಿ.ಟಿ. ರವಿ ಅವರು, ನ್ಯಾಯಾಧೀಶರೇನು ಸರ್ವಜ್ಞರೇ ಎಂದು ಹೇಳಿದ್ದಾರೆ. ಆದರೆ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯದ ಪರವಾಗಿ ಸಂಸದರು, ರಾಜ್ಯ ಸಚಿವರು ಮಾತನಾಡಿದ್ದರೆ ನ್ಯಾಯಾಲಯ ಮಧ್ಯ ಪ್ರವೇಶ ಮಾಡುತ್ತಿತ್ತೆ ಎಂದು ಪ್ರಶ್ನಿಸಿದರು‌.

ಸಿಟಿ ರವಿ, ಸದಾನಂದ ಗೌಡರ ಕುರಿತು ಧ್ರುವನಾರಾಯಣ್ ಮಾತು

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಕೊರೊನಾ ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿದರು.

ಚಾಮರಾಜನಗರ ಆಕ್ಸಿಜನ್ ಕೊರತೆಯಿಂದ ಮೃತಪಟ್ಟ ಘಟನೆ ಬಗ್ಗೆ ನಿವೃತ್ತ ನ್ಯಾಯಾಧೀಶರು ಸರಿಯಾಗಿ ತನಿಖೆ ಮಾಡಿದ್ದಾರೆ. ಚಾಮರಾಜನಗರ ಡಿಸಿ ಆ ಸಂದರ್ಭದಲ್ಲಿ ಡೈನಾಮಿಕ್ ಆಗಿ ಕೆಲಸ ಮಾಡಬೇಕಿತ್ತು, ಆದರೆ ವಿಫಲರಾಗಿದ್ದಾರೆ ಎಂದರು.

ಇದನ್ನೂ ಓದಿ:"ಅತಿ ಹೆಚ್ಚು ಜನರ ಸಾವಿಗೆ ಲಸಿಕೆ ಬಗ್ಗೆ ದಾರಿ ತಪ್ಪಿಸಿದ ಪಕ್ಷಗಳೇ ಕಾರಣ"

ABOUT THE AUTHOR

...view details