ಕರ್ನಾಟಕ

karnataka

ETV Bharat / state

ಸೂರ್ಯನ ಕಡೆ ಮುಖ ಮಾಡಿ ಉಗುಳಿದ್ರೆ ಅದು ಅವರ ಮುಖಕ್ಕೇ ಬೀಳುತ್ತೆ: ಮೋದಿ ಟೀಕಾಕಾರರ ಬಗ್ಗೆ ಪ್ರತಾಪ್‌ ಸಿಂಹ ಗರಂ - If criticize modi, its like spit

ಪ್ರಧಾನಿ ಮೋದಿ ಅವರು ದೇದೀಪ್ಯಮಾನವಾಗಿ ವಿರಾಜಿಸುತ್ತಿರುವ ಸೂರ್ಯನ ತರ. ಸೂರ್ಯನನ್ನು ನೋಡಿ ಉಗಿದರೆ, ಆ ಉಗುಳು ಉಗಿದವರ ಮುಖಕ್ಕೇ ಬೀಳುತ್ತೆ ಎಂದು ಮೋದಿಯನ್ನು ಟೀಕಿಸುವವರ ವಿರುದ್ಧ ಸಂಸದ ಪ್ರತಾಪಸಿಂಹ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಾಪಸಿಂಹ
ಪ್ರತಾಪಸಿಂಹ

By

Published : Apr 29, 2021, 12:29 PM IST

ಮೈಸೂರು: ಮೋದಿ ಸೂರ್ಯನ ಹಾಗೆ ಪ್ರಜ್ವಲಿಸುತ್ತಿರುವವರು. ಅವರನ್ನು ಟೀಕಿಸಿದರೆ ಆಕಾಶಕ್ಕೆ ಉಗಿದಂತೆ. ಅದು ತಿರುಗಿ ಉಗಿದವರ ಮೇಲೆಯೇ ಬೀಳುತ್ತದೆ ಎಂದು ಸಂಸದ ಪ್ರತಾಪಸಿಂಹ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಪ್ರತಾಪ್​ ಸಿಂಹ

ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಮೋದಿ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗುತ್ತಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮೋದಿ ಅವರು ದೇ ದೀಪ್ಯಮಾನವಾಗಿ ವಿರಾಜಿಸುತ್ತಿರುವ ಸೂರ್ಯನ ತರ. ಸೂರ್ಯ ನೋಡಿ ಉಗಿದರೆ, ಆ ಉಗುಳು ಅವರ ಮುಖಕ್ಕೆ ಬೀಳುತ್ತೆ ಎಂದರು.

ಉದ್ಯಮಿ ವಿಜಯಸಂಕೇಶ್ವರ್ ಅವರು ನಿಂಬೆಹಣ್ಣಿನ ರಸ ಕೊರೊನಾಗೆ ಚಿಕಿತ್ಸೆ ಅಂತ ಹೇಳಿಲ್ಲ. ಅವರ ಬಗ್ಗೆ ಹುಳುಕು ಹುಡುಕುವವರು ಹುಡುಕಲಿ. ಅವರು ಕನ್ನಡ ಪತ್ರಿಕೋದ್ಯಮದ ದಿಕ್ಕು ಬದಲಾಯಿಸಿದ ಧೀಮಂತ ವ್ಯಕ್ತಿ ಎಂದರು.

ABOUT THE AUTHOR

...view details