ಕರ್ನಾಟಕ

karnataka

ETV Bharat / state

ಮೈಸೂರು: ಪ್ರಿಯಕರ ಕೈಕೊಟ್ಟಿದ್ದಕ್ಕೆ ಪ್ರಿಯತಮೆ ಆತ್ಮಹತ್ಯೆಗೆ ಶರಣು - ಯುವತಿ ಡೆತ್​ ನೋಟ್​​ ಬರೆದಿಟ್ಟು ಆತ್ಮಹತ್ಯೆ

Mysore crime: ಪ್ರಿಯಕರ ಕೈಕೊಟ್ಟಿದ್ದಕ್ಕೆ ಮನನೊಂದ ಯುವತಿ ಡೆತ್​ ನೋಟ್​​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

crime-young-girl-committed-suicide-for-love-failure-in-mysore
ಮೈಸೂರು: ಪ್ರಿಯಕರ ಕೈಕೊಟ್ಟಿದ್ದಕ್ಕೆ ಪ್ರಿಯತಮೆ ಆತ್ಮಹತ್ಯೆಗೆ ಶರಣು

By

Published : Jul 23, 2023, 9:21 PM IST

ಮೈಸೂರು:ಪ್ರೀತಿಸಿದ ಹುಡುಗ ಕೈಕೊಟ್ಟಿದ್ದಕ್ಕೆ ಮನನೊಂದ ಯುವತಿ ಡೆತ್​ ನೋಟ್​​ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕೆ ಆರ್ ನಗರ ತಾಲೂಕಿನಲ್ಲಿ ನಡೆದಿದೆ. ನಿಸರ್ಗಾ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ನಿಸರ್ಗಾ ಕೆ.ಆರ್. ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು.

ಯುವತಿಗೆ 4 ವರ್ಷದ ಹಿಂದೆ ಸುಹಾಸ್ ರೆಡ್ಡಿ ಎಂಬ ಯುವಕನ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿತ್ತು. ಆದರೆ ಇತ್ತೀಚಿಗೆ ಕೆಲ ದಿನಗಳಿಂದ ಪ್ರಿಯತಮ ಸುಹಾಸ್ ವರ್ತನೆಯಲ್ಲಿ ಬದಲಾವಣೆ ಕಂಡಿದ್ದು, ಆತ ಮತ್ತೊಬ್ಬ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದನು. ನಿಸರ್ಗಾ ಪ್ರಿಯತಮ ಸುಹಾಸ್​ಗೆ ಇತ್ತೀಚಿಗೆ ಪರಿಚಯವಾಗಿದ್ದ ಮೊತ್ತೊಬ್ಬ ಯುವತಿಯ ಪೋಷಕರಿಗೂ ಈ ಬಗ್ಗೆ ವಿಷಯ ತಿಳಿಸಿದ್ದಾಳೆ. ಆದರೆ ಆ ಯುವತಿಯ ಪೋಷಕರು ಕೆಟ್ಟದಾಗಿ ನಿಂದಿಸಿ ಸಾಯುವಂತೆ ಪ್ರೇರೇಪಿಸಿದ್ದಾರೆ ಎಂಬ ಡೆತ್​ನೋಟ್​​ನಲ್ಲಿ ಬರೆದಿಟ್ಟಿದ್ದಾಳೆ. ಸದ್ಯ ಕೆ. ಆರ್. ನಗರ ಪೊಲೀಸರು ನಿಸರ್ಗಾ ಬರೆದಿರುವ ಡೆತ್ ನೋಟ್ ಆಧರಿಸಿ ಐದು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಅಂತರ ಕಾಯ್ದುಕೊಂಡಿದ್ದಕ್ಕೆ ಕೋಪ; ಪ್ರಿಯಕರನಿಗೆ ಚಾಕುವಿನಿಂದ ಇರಿದ ಪ್ರೇಯಸಿ

ಡೆತ್ ನೋಟ್ ಬರೆದಿಟ್ಟು ಗೃಹಿಣಿ ಆತ್ಮಹತ್ಯೆ: ಪತಿ ಹಾಗೂ ಆತನ ಗರ್ಲ್ ಫ್ರೆಂಡ್ ವಿರುದ್ಧ ಡೆತ್ ನೋಟ್ ಬರೆದಿಟ್ಟು ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ಜುಲೈ 2ರಂದು ಕೆಂಗೇರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು, ಪವಿತ್ರಾ ಆತ್ಮಹತ್ಯೆಗೆ ಶರಣಾದ ಮಹಿಳೆ. ಹೆಗ್ಗನಹಳ್ಳಿ‌ ನಿವಾಸಿಯಾಗಿದ್ದ ಪವಿತ್ರಾಗೆ ಇದು ಎರಡನೇ ಮದುವೆಯಾಗಿತ್ತು. ಮೊದಲ ಪತಿಯೊಂದಿಗೆ ಕೌಟುಂಬಿಕ ಕಲಹ ಏರ್ಪಟ್ಟಿದ್ದರಿಂದ ಇಬ್ಬರೂ ಪರಸ್ಪರ ಸಮ್ಮತಿಯೊಂದಿಗೆ ವಿಚ್ಛೇದನ ಪಡೆದಿದ್ದರು. ಬಳಿಕ ಖಾಸಗಿ ಕಂಪನಿಯೊಂದರಲ್ಲಿ‌ ಮ್ಯಾನೇಜರ್ ಆಗಿ ಕೆಲಸ ಆರಂಭಿಸಿದ್ದ ಪವಿತ್ರ ಅದೇ ಕಂಪನಿಯ ಮಾಲೀಕನಾಗಿರುವ ಚೇತನ್ ಗೌಡ ಎಂಬುರನ್ನು ಪ್ರೀತಿಸಿ ವಿವಾಹವಾಗಿದ್ದರು.

ತೀವ್ರವಾಗಿ ಮನನೊಂದಿದ್ದ ಪವಿತ್ರಾ, ಜುಲೈ 2ರಂದು ಗಂಡನೊಂದಿಗಿನ ಜಗಳದ ದೃಶ್ಯಗಳು, ಡೆತ್ ನೋಟ್ ಫೋಟೋಗಳನ್ನ ವಾಟ್ಸ್​ಆ್ಯಪ್​ ಸ್ಟೇಟಸ್ ನಲ್ಲಿ ಪ್ರಕಟಿಸಿದ್ದರು. ಸ್ಟೇಟಸ್ ನೋಡಿದ್ದ ಪವಿತ್ರಾರ ತಾಯಿ ಮಗಳ ಮನೆಗೆ ಬಂದು ನೋಡಿದಾಗ ಆಕೆ ನೇಣಿಗೆ ಶರಣಾಗಿರುವುದು ಪತ್ತೆಯಾಗಿತ್ತು. ಮೃತಳ ತಾಯಿ ಪದ್ಮಮ್ಮ ನೀಡಿರುವ ದೂರಿನನ್ವಯ ಚೇತನ್ ಗೌಡ ಹಾಗೂ ಅವರ ಪ್ರೇಯಸಿಯ ವಿರುದ್ಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡೆತ್ ನೋಟ್ ಹಾಗೂ ಮೃತಳ ಎರಡು ಮೊಬೈಲ್ ಫೋನ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಕೆಂಗೇರಿ ಠಾಣಾ ಪೊಲೀಸರು ತಿಳಿಸಿದ್ದರು.

ABOUT THE AUTHOR

...view details