ಕರ್ನಾಟಕ

karnataka

ETV Bharat / state

Mysore crime: ಪೊಲೀಸರ ಮಿಂಚಿನ ಕಾರ್ಯಾಚರಣೆ.. ವಕೀಲರ ಮನೆಗೆ ಕನ್ನ ಹಾಕಿದ್ದ ಐವರು ಆರೋಪಿಗಳ ಬಂಧನ - ಈಟಿವಿ ಭಾರತ ಕರ್ನಾಟಕ

ವಕೀಲರೊಬ್ಬರ ಮನೆಗೆ ಕನ್ನ ಹಾಕಿ 6 ಲಕ್ಷ ನಗದು ದೋಚಿದ್ದ ಐವರು ಕಳ್ಳರನ್ನು ಕುವೆಂಪುನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Etv Bharatcrime-5-accused-arrested-by-kuvempunagar-police-for-theft-in-lawyer-house
ಮೈಸೂರು: ವಕೀಲರ ಮನೆಯಲ್ಲಿ‌ ಕಳ್ಳತನ ಮಾಡಿದ್ದ ಐವರು ಆರೋಪಿಗಳ ಬಂಧನ

By

Published : Jun 10, 2023, 10:42 PM IST

ಮೈಸೂರು: ವಕೀಲರೊಬ್ಬರ ಮನೆಗೆ ಕನ್ನ ಹಾಕಿ 6 ಲಕ್ಷ ನಗದು ದೋಚಿದ್ದ 5 ಮಂದಿ ಕಳ್ಳರನ್ನು ಬಂಧಿಸುವಲ್ಲಿ ಕುವೆಂಪುನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 2 ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ 20 ಲಕ್ಷ ಮೌಲ್ಯದ ಒಂದು ಕಾರು, 40 ಸಾವಿರ ಮೌಲ್ಯದ ಆಕ್ಟಿವಾ ಹೋಂಡಾ, 5 ಮೊಬೈಲ್​ಗಳನ್ನ ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಪ್ರಮುಖ ಆರೋಪಿಯ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಅನಿಲ್ ಕುಮಾರ್, ನರೇಂದ್ರ, ಪುಟ್ಟಸ್ವಾಮಿ, ಅಭಿಷೇಕ್, ಪ್ರಕಾಶ್ ಬಂಧಿತ ಆರೋಪಿಗಳು. ಯೋಗಾನಂದ್ ಅಲಿಯಾಸ್ ​ಉಪೇಂದ್ರ ತಲೆ ಮರೆಸಿಕೊಂಡಿರುವ ಆರೋಪಿ. ಮೇ 3 ರಂದು ಶ್ರೀರಾಂಪುರ ಬಡಾವಣೆಯಲ್ಲಿರುವ ಹಿರಿಯ ವಕೀಲರಾದ ಜಯಪ್ರಕಾಶ್ ರಾವ್ ಮನೆ ಬಾಗಿಲು ಮೀಟಿ 6 ಲಕ್ಷ ನಗದು ದೋಚಿದ್ದರು. ಪ್ರಕರಣ ದಾಖಲಿಸಿಕೊಂಡ ಕುವೆಂಪುನಗರ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ 6 ಆರೋಪಿಗಳ ಪೈಕಿ ಐವರನ್ನ ಬಂಧಿಸಿದ್ದಾರೆ.

ಕೃತ್ಯ ನಡೆದ ನಂತರ ಸಿಸಿಟಿವಿ ಕ್ಯಾಮೆರಾ ಫುಟೇಜ್ ಗಳನ್ನ ಆಧರಿಸಿ ಕಾರ್ಯಾಚರಣೆ ನಡೆಸಿದ ಕುವೆಂಪುನಗರ ಪೊಲೀಸರು, ಖದೀಮರ ಹೆಡೆಮುರಿ ಕಟ್ಟಿದ್ದಾರೆ. ಐಶಾರಾಮಿ ಜೀವನ ನಡೆಸುವ ಉದ್ದೇಶದಿಂದ ಖದೀಮರು ಕೃತ್ಯ ಎಸಗಿ ಸಿಕ್ಕಿಬಿದ್ದಿದ್ದಾರೆ. ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ಯೋಗಾನಂದ ನಟೋರಿಯಸ್ ಎಂದು ಹೇಳಲಾಗಿದೆ. ಈತನ ವಿರುದ್ಧ 15 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಡಕಾಯಿತಿ, ರಾಬರಿ, ಕಳವು ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆ.

ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ಕೆ.ಆರ್. ಉಪವಿಭಾಗದ ಎಸಿಪಿ ಗಂಗಾಧರ ಸ್ವಾಮಿ ಉಸ್ತುವಾರಿಯಲ್ಲಿ ಕುವೆಂಪುನಗರ ಠಾಣೆಯ ಇನ್ಸ್ಪೆಕ್ಟರ್ ಅರುಣ್ ರವರ ನೇತೃತ್ವದಲ್ಲಿ ಪಿಎಸ್​ಐಗಳಾದ ಗೋಪಾಲ್, ಕು.ರಾಧ ಹಾಗೂ ಸಿಬ್ಬಂದಿಗಳಾದ ಕುಮಾರ್, ಮಂಜುನಾಥ, ಆನಂದ, ಪುಟ್ಟಪ್ಪ, ಹಜರತ್ ಮತ್ತಿತರರು ಕಾರ್ಯಾಚರಣೆ ನಡೆಸಿ ಆರೋಪಿಗಳಚನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಶಸ್ವಿ ಕಾರ್ಯಾಚರಣೆಯನ್ನ ನಗರ ಪೊಲೀಸ್ ಆಯುಕ್ತರಾದ ಬಿ.ರಮೇಶ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ಉಪಪೋಲೀಸ್ ಆಯುಕ್ತರಾದ ಎಂ.ಮುತ್ತುರಾಜ್ ರವರು ಪ್ರಶಂಸಿಸಿದ್ದಾರೆ.

ಇದನ್ನೂ ಓದಿ:Bengaluru lady murder.. ಒಂಟಿ ಮಹಿಳೆ ಬರ್ಬರ ಕೊಲೆ.. ಶವ ಸಾಗಿಸಲು ಕೈ ಕಾಲು ಕತ್ತರಿಸಿದ್ರು: ಬನ್ನೇರುಘಟ್ಟ ಪೊಲೀಸರಿಂದ ಬಿಹಾರ ಮೂಲದ ಆರೋಪಿ ಅರೆಸ್ಟ್​

ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಸಹೋದರರ ಬಂಧನ:ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಕದ್ದು, ನಂತರ ಗಾಡಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಇಬ್ಬರು ಕಳ್ಳ ಸಹೋದರರನ್ನು ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಪ್ರದೇಶ ಮೂಲದ ಉದಯ್ ಕುಮಾರ್ (26) ಹಾಗೂ ಶ್ರೀನಿವಾಸುಲು (23) ಬಂಧಿತ ಸಹೋದರರು. ಬಂಧಿತರಿಂದ 5 ರಾಯಲ್ ಎನ್ ಫೀಲ್ಡ್ ಸೇರಿದಂತೆ 16 ಲಕ್ಷ ಮೌಲ್ಯದ 9 ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ. ಆಂಧ್ರಪ್ರದೇಶ ಮೂಲದವರಾಗಿರುವ ಆರೋಪಿಗಳು ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ಪೇಂಟಿಂಗ್​​​​​ ಕೆಲಸ ಮಾಡಿಕೊಂಡಿದ್ದರು. ಆದರೆ ರಾತ್ರಿ ವೇಳೆ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು.

ABOUT THE AUTHOR

...view details