ಕರ್ನಾಟಕ

karnataka

By

Published : Jul 6, 2020, 4:29 PM IST

Updated : Jul 6, 2020, 4:51 PM IST

ETV Bharat / state

ಮೈಸೂರು ವಿವಿಗೂ ಕೋವಿಡ್​ ಭೀತಿ: 10 ದಿನ ಕ್ರಾಫರ್ಡ್ ಹಾಲ್​ ಬಂದ್​

ಮೈಸೂರು ವಿವಿ ಪರೀಕ್ಷಾಂಗ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಕೋವಿಡ್​ ಸೋಂಕು ದೃಢಪಟ್ಟಿದ್ದು, ಕ್ರಾಫರ್ಡ್ ಹಾಲ್ ಬಂದ್ ಮಾಡಲಾಗಿದೆ.

ಮೈಸೂರು ವಿವಿ
ಮೈಸೂರು ವಿವಿ

ಮೈಸೂರು: ಪರೀಕ್ಷಾಂಗ ವಿಭಾಗದ ಸಿಬ್ಬಂದಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ 10 ದಿನಗಳ ಕಾಲ ಮೈಸೂರು ವಿವಿಯ ಕ್ರಾಫರ್ಡ್ ಹಾಲ್ ಬಂದ್ ಮಾಡಲಾಗಿದೆ.

ಮೈಸೂರು ವಿವಿ ಪರೀಕ್ಷಾಂಗ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಕೋವಿಡ್​ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕ್ರಾಫರ್ಡ್ ಹಾಲ್​​ನ‌ ಎಲ್ಲಾ ಆಡಳಿತ ವಿಭಾಗದ ಕಚೇರಿಗಳಿಗೆ ಸ್ಯಾನಿಟೈಸ್ ಮಾಡಿ ಅಗತ್ಯ ಸಿಬ್ಬಂದಿ ಮಾತ್ರ ಕೆಲಸಕ್ಕೆ ಹಾಜರಾಗಬೇಕು. ಉಳಿದ ಸಿಬ್ಬಂದಿ ಮನೆಯಿಂದಲೇ ಕೆಲಸ ನಿರ್ವಹಿಸಿಸಬೇಕೆಂದು ತಿಳಿಸಲಾಗಿದೆ.

ಇಂದಿನಿಂದ ಜುಲೈ 15ರವರೆಗೆ ಕ್ರಾಫರ್ಡ್ ಹಾಲ್ ಬಂದ್ ಮಾಡಲಾಗಿದೆ. ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ ವ್ಯಕ್ತಿಗಳು ಹೋಮ್ ಕ್ವಾರಂಟೈನ್​ನಲ್ಲಿ ಇರಬೇಕೆಂದು ತಿಳಿಸಲಾಗಿದೆ ಎಂದು ಮೈಸೂರು ವಿವಿಯ ರಿಜಿಸ್ಟ್ರಾರ್​ ಶಿವಪ್ಪ ಈಟಿವಿ ಭಾರತ್​ಗೆ ದೂರವಾಣಿ ಮೂಲಕ ತಿಳಿಸಿದರು.

Last Updated : Jul 6, 2020, 4:51 PM IST

ABOUT THE AUTHOR

...view details