ಕರ್ನಾಟಕ

karnataka

By

Published : Mar 7, 2021, 1:38 PM IST

ETV Bharat / state

'ಆಧುನಿಕ ಯುಗದ ಗ್ರಾಫಿಕ್ಸ್​‌ಗೆ ಬಲಿಪಶು ಆಗುವ ಭಯ ಕಾಡುತ್ತಿದೆ'

ಸಚಿವರುಗಳು ಮಾನ-ಮರ್ಯಾದೆ, ಗೌರವದ ಕಾರಣಕ್ಕಾಗಿ ಕೋರ್ಟ್ ಮೊರೆ ಹೋಗಿದ್ದಾರೆಂದು ಸಚಿವರ ಪರ ಸಿ‌‌‌.ಪಿ.ಯೋಗೇಶ್ವರ್ ಬ್ಯಾಟಿಂಗ್ ಮಾಡಿದರು‌‌‌.

C. P. Yogeeshwar
ಸಚಿವ ಸಿ‌‌‌.ಪಿ.ಯೋಗೇಶ್ವರ್

ಮೈಸೂರು:ಆಧುನಿಕ ಯುಗದ ಗ್ರಾಫಿಕ್ಸ್​‌ಗೆ ಬಲಿಪಶು ಆಗುವ ಭಯ ನಮಗೆ ಕಾಡುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ‌‌‌.ಪಿ.ಯೋಗೇಶ್ವರ್ ಕೋರ್ಟ್ ​ಮೊರೆ ಹೋದ ಸಚಿವರನ್ನು ಸಮರ್ಥಿಸಿಕೊಂಡಿದ್ದಾರೆ‌.

ಸಚಿವ ಸಿ‌‌‌.ಪಿ.ಯೋಗೇಶ್ವರ್ ಪ್ರತಿಕ್ರಿಯೆ

ಶ್ರೀಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಗ್ರಾಫಿಕ್ಸ್ ಯುಗ. ಅದಕ್ಕಾಗಿ ಮಾನ-ಮರ್ಯಾದೆಗೆ ಅಂಜಿದ್ದೇವೆ. ದೃಶ್ಯ ಮಾಧ್ಯಮಗಳನ್ನು ತಿರುಚುವ, ಧ್ವನಿ‌ ನೀಡುವ ಕೆಲಸ ಆಗುತ್ತಿದೆ. ಗ್ರಾಫಿಕ್ಸ್ ಮೂಲಕ ಕೈ, ಕಾಲು, ತಲೆ ಕತ್ತರಿಸಿದಂತೆ ಮಾಡಬಹುದು. ಸಿನಿಮಾದಿಂದ ಬಂದ ನನಗೆ ಅದೆಲ್ಲಾ ಗೊತ್ತಿದೆ. ಸಚಿವರು ಗೌರವದ ಕಾರಣಕ್ಕಾಗಿ ಕೋರ್ಟ್ ಮೊರೆ ಹೋಗಿದ್ದಾರೆಂದು ಅವರು ಹೇಳಿದರು.

ಸುಳ್ಳು ಬೇಗ ಹರಡುತ್ತದೆ. ಅದು ಸುಳ್ಳು ಎಂದು ಸಾಬೀತಾಗಲು ಸಮಯ ಬೇಕು. ಆದರೆ ಮಾಧ್ಯಮದಲ್ಲಿ ಬಂದ ಕೂಡಲೇ ಅದನ್ನು ಜನ ನಂಬುತ್ತಾರೆ. ಆದರೆ ಸತ್ಯ ಹೊರಬರುವುದು ಪೊಲೀಸ್ ತನಿಖೆಯ ಮೂಲಕ. ಅದಕ್ಕಾಗಿ ನಾವೆಲ್ಲಾ ಭಯಪಡುತ್ತಿದ್ದೇವೆ ಎಂದು ಸಿ.ಪಿ.ಯೋಗೋಶ್ವರ್‌ ತಿಳಿಸಿದರು.

ಮೈಸೂರು ಪ್ರವಾಸೋದ್ಯಮವನ್ನು ಬ್ರಾಂಡ್ ಮಾಡಲು ಚಿಂತನೆ:

ಮೈಸೂರಿನ ಹೆಸರಿನಲ್ಲಿ ಬ್ರಾಂಡ್ ಮಾಡಲು ಸರ್ಕಾರ ಮುಂದಾಗಿದೆ. ಈ‌ ನಿಟ್ಟಿನಲ್ಲಿ ಚರ್ಚೆಗಾಗಿ ಪದೇ ಪದೆ ಮೈಸೂರಿಗೆ ಬರುತ್ತಿದ್ದೇನೆ. ಇದನ್ನು ಹೊರತುಪಡಿಸಿ ಇನ್ಯಾವ ರಾಜಕೀಯ ಉದ್ದೇಶವಿಲ್ಲ ಎಂದರು.

ನಾನು ರಾಮನಗರ ಉಸ್ತುವಾರಿ ಕೊಡಿ ಎಂದು ಕೇಳಿದ್ದೇನೆ. ಆದರೆ ಸಿಎಂ ಈ ಬಗ್ಗೆ ಇನ್ನೂ ಸ್ಪಷ್ಟಪಡಿಸಿಲ್ಲ. ಮೈಸೂರು ಉಸ್ತುವಾರಿ ಸಚಿವನಾಗುವ ಉದ್ದೇಶದಿಂದ ಮೈಸೂರಿಗೆ ಬರುತ್ತಿಲ್ಲ. ರಾಜ್ಯದ ಪ್ರವಾಸೋದ್ಯಮ ಬಹಳ ಹಿಂದಿದೆ. ಮೈಸೂರಿಗೆ ಬರುವ ಪ್ರವಾಸಿಗರಿಗೆ ಇಲ್ಲಿನ ವ್ಯವಸ್ಥೆ ಬಗ್ಗೆ ನಿರಾಸೆಯಾಗುತ್ತಿದೆ. ಇದನ್ನೆಲ್ಲ ನಿವಾರಿಸುವ ದೃಷ್ಟಿಯಿಂದ ವಿವಿಧ ಯೋಜನೆ ರೂಪಿಸಿದ್ದೇನೆ ಎಂದು ಯೋಗೇಶ್ವರ್ ತಿಳಿಸಿದರು.

ಇದನ್ನೂ ಓದಿ:ಸಿಡಿ ಪ್ರಕರಣದ ಹಿಂದೆ ಕನಕಪುರ, ಬೆಳಗಾವಿ ಕಡೆಯವರಿದ್ದಾರೆ: ಸಿ.ಪಿ.ಯೋಗೇಶ್ವರ್​​

ABOUT THE AUTHOR

...view details