ಮೈಸೂರು: ಎನ್.ಆರ್.ಕ್ಷೇತ್ರಕ್ಕೆ ಕೊರೊನಾ ಲಸಿಕೆ ಸ್ಥಗಿತ ಮಾಡಿದ್ದರಿಂದ ಶಾಸಕ ತನ್ವೀರ್ ಸೇಠ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಭೇಟಿ ಮಾಡಿ ಲಸಿಕೆ ಒದಗಿಸಿಕೊಡುವಂತೆ ಹೇಳಿದ್ದಾರೆ.
ಲಸಿಕೆ ಸ್ಥಗಿತ: ಜಿಲ್ಲಾಧಿಕಾರಿ ಭೇಟಿಯಾದ ಶಾಸಕ ತನ್ವೀರ್ ಸೇಠ್
ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರನ್ನು ಭೇಟಿ ಮಾಡಿ ಲಸಿಕೆ ಒದಗಿಸಿಕೊಡುವಂತೆ ತಿಳಿಸಿದ್ದೇನೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
ಶಾಸಕ ತನ್ವೀರ್ ಸೇಠ್
ಈ ಕುರಿತು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಾಧ್ಯಮಗಳೊಂದಿಗೆ ಮಾತನಾಡಿದ ತನ್ವೀರ್ ಸೇಠ್, ನನ್ನ ಕ್ಷೇತ್ರಕ್ಕೆ 80 ಸಾವಿರ ಲಸಿಕೆ ವ್ಯತ್ಯಾಸ ಬಂದಿದೆ. ಲಸಿಕೆ ಅಭಿಯಾನ ಆರಂಭಿಸಿ, ಮೂರು ದಿನಗಳಿಂದ 4 ಸಾವಿರ ಲಸಿಕೆ ಹಾಕಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಬಡವರು ಹೆಚ್ಚಾಗಿದ್ದು, ಲಸಿಕೆ ಕೊಡಿಸುವಂತೆ ಕೇಳಿದ್ದೇನೆ ಎಂದರು.
ಕ್ಷೇತ್ರದಲ್ಲಿರುವ 8 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಬಿಡಿ ಆಸ್ಪತ್ರೆಗಳಲ್ಲಿ ಲಸಿಕೆ ಅಭಿಯಾನ ಮಾಡಿ, ಜನರಿಗೆ ಅನುಕೂಲ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ ಎಂದು ಅವರು ಹೇಳಿದರು.