ಮೈಸೂರು:ನಗರದಲ್ಲಿ ಕೋವಿಡ್ ಸಂಖ್ಯೆ ದಿನದಂದು ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಣಕ್ಕೆ ತರಲು ಜೊತೆಗೆ ಬೇರೆ ಬೇರೆ ಕಡೆಯಿಂದ ಮೈಸೂರು ಅರಮನೆಯನ್ನು ಹಾಗೂ ಇತರ ಪ್ರವಾಸಿ ಸ್ಥಳಗಳನ್ನು ನೋಡಲು ಬರುವ ಜನರಿಗೆ ಅರಮನೆ ಆವರಣದಲ್ಲಿ ಕೋವಿಡ್ ಪರೀಕ್ಷೆ ಆರಂಭಿಸಿದ್ದು, ಪ್ರತಿಯೊಬ್ಬ ಪ್ರವಾಸಿಗರು ಅರಮನೆ ವೀಕ್ಷಣೆಗೆ ಹೋಗುವ ಮುನ್ನ ಅಲ್ಲಿಯೇ ಕೋವಿಡ್ ಟೆಸ್ಟ್ಗೆ ಒಳಪಡಬೇಕು.
ಮೈಸೂರು ಅರಮನೆ ವೀಕ್ಷಿಸಲು ಕೋವಿಡ್ ಟೆಸ್ಟ್ ಕಡ್ಡಾಯ - Covid Test is mandatory to watch Mysore Palace
ಮೈಸೂರು ಅರಮನೆ ಹಾಗೂ ಇತರ ಪ್ರವಾಸಿ ಸ್ಥಳಗಳನ್ನು ನೋಡಲು ಬರುವ ಜನರಿಗೆ ಅರಮನೆ ಆವರಣದಲ್ಲಿ ಕೋವಿಡ್ ಪರೀಕ್ಷೆ ಆರಂಭಿಸಿದ್ದು, ಪ್ರತಿಯೊಬ್ಬ ಪ್ರವಾಸಿಗರು ಅರಮನೆ ವೀಕ್ಷಣೆಗೆ ಹೋಗುವ ಮುನ್ನ ಅಲ್ಲಿಯೇ ಕೋವಿಡ್ ಟೆಸ್ಟ್ಗೆ ಒಳಪಡಬೇಕು.
ಅರಮನೆ ವೀಕ್ಷಿಸಲು ಕೋವಿಡ್ ಪರೀಕ್ಷೆ ಕಡ್ಡಾಯ
ಈ ಬಗ್ಗೆ ವಿವರಣೆ ನೀಡಿದ್ದ ಕೋವಿಡ್ ಟೆಸ್ಟ್ನ ಮುಖ್ಯಸ್ಥ ಅಜಯ್ ಕುಮಾರ್, ಇಲ್ಲಿಗೆ ಪ್ರವಾಸಿಗರು ಬೇರೆ ಬೇರೆ ಕಡೆಯಿಂದ ಬರುತ್ತಾರೆ. ಅವರಿಗೆ ಕೊರೊನಾ ಸೋಂಕು ತಗುಲಿರುವ ಸಾಧ್ಯತೆ ಇರುತ್ತದೆ. ಹಾಗಾಗಿ ಟೆಸ್ಟ್ ಮಾಡುತ್ತಿದ್ದೇವೆ. ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಹಾಗೂ ಆರ್ಟಿಪಿಸಿಆರ್ ಟೆಸ್ಟ್ ಮಾಡುತ್ತಿದ್ದೇವೆ. ರಿಪೋರ್ಟ್ 30 ನಿಮಿಷಗಳಲ್ಲೇ ದೊರೆಯುತ್ತದೆ ಎಂದು ಹೇಳಿದರು.
ಪಾಸಿಟಿವ್ ಬಂದರೆ ಅವರಿಗೆ ರಿಪೋರ್ಟ್ ಕೊಟ್ಟು ವಾಪಸ್ ಕಳುಹಿಸುತ್ತೇವೆ. ಪರೀಕ್ಷೆ ಮಾಡಿಸಿಕೊಳ್ಳಲು ಬೆಳಗ್ಗೆ 6.30 ರಿಂದ ಸಂಜೆ 5ರ ವರೆಗೂ ಅವಕಾಶವಿದೆ ಎಂದು ತಿಳಿಸಿದರು.