ಕರ್ನಾಟಕ

karnataka

ETV Bharat / state

ಸಿನಿಮಾ ನೋಡಲು ಕೋವಿಡ್ ನೆಗೆಟಿವ್ ವರದಿ ಕಡ್ಡಾಯ: ಥಿಯೇಟರ್​ ಮಾಲೀಕರಿಂದ ತೀವ್ರ ವಿರೋಧ - ಮೈಸೂರಿನಲ್ಲಿ ಸಿನಿಮಾ ನೋಡಲು ಕೋವಿಡ್ ವರದಿ ಕಡ್ಡಾಯ

ಸಿನಿಮಾ ನೋಡಲು ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಮಾಡಿರುವ ಮೈಸೂರು ಜಿಲ್ಲಾಧಿಕಾರಿ ಕ್ರಮಕ್ಕೆ ಥಿಯೇಟರ್​ ಮಾಲೀಕರಿಂದ ವಿರೋಧ ವ್ಯಕ್ತವಾಗಿದೆ.

Covid report Mandatory for theater in Mysur
ಸಿನಿಮಾ ನೋಡಲು ಕೋವಿಡ್ ವರದಿ ಕಡ್ಡಾಯ

By

Published : Apr 8, 2021, 3:49 PM IST

ಮೈಸೂರು: ಮುಂದಿನ ಹತ್ತುದಿನಗಳ ಕಾಲ ಸಿನಿಮಾ ನೋಡಲು ಬರುವವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಿರುವ ಜಿಲ್ಲಾಧಿಕಾರಿಯವರ ಕ್ರಮಕ್ಕೆ ಚಿತ್ರಮಂದಿರಗಳ ಮಾಲೀಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್ 10ರಿಂದ 30ರವರೆಗೆ ಹಬ್ಬದ ರಜೆ ಇರುವುದರಿಂದ ಹೆಚ್ಚಿನ ಜನ ಸಿನಿಮಾ ಮಂದಿರಕ್ಕೆ ಬರಬಹುದು ಎಂಬ ಉದ್ದೇಶದಿಂದ ಈ 10 ದಿನಗಳ ಕಾಲ ಸಿನಿಮಾ ನೋಡಲು ಬರುವವರು ಕೋವಿಡ್ ನೆಗೆಟಿವ್ ವರದಿ ತರುವುದನ್ನು ಕಡ್ಡಾಯಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದಕ್ಕೆ ಚಿತ್ರಮಂದಿರಗಳ ಮಾಲೀಕರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಓದಿ : ಕೋವಿಡ್​ ಉಲ್ಬಣ: ಮನೆ‌ ಮನೆಗೆ ತೆರಳಿ ಸರ್ವೇ ಕಾರ್ಯಕ್ಕೆ ಮುಂದಾದ ಬಿಬಿಎಂಪಿ

ಲಾಕ್​ಡೌನ್​ ಬಳಿಕ ಸಿನಿಮಾ ಮಂದಿರ ತೆರೆದು ಈಗ ತಾನೆ ಜನ ಥಿಯೇಟರ್​ ಕಡೆ ಬರಲು ಪ್ರಾರಂಭಿಸಿದ್ದಾರೆ. ಇದೀಗ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಸಿನಿಮಾ ನೋಡಲು ಬನ್ನಿ ಎಂದರೆ ಯಾರು ತಾನೆ ಬರುತ್ತಾರೆ. ಹಬ್ಬದ ದಿನಗಳಲ್ಲಿ‌ ಮತ್ತು ರಜಾ ದಿನಗಳಲ್ಲಿ ಸಿನಿಮಾ ನೋಡಲು ಹೆಚ್ಚು ಜನ ಬರುತ್ತಾರೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಆದೇಶ ಸರಿಯಲ್ಲ. ಜಿಲ್ಲಾಧಿಕಾರಿಗಳು ಕೂಡಲೇ ಈ ಆದೇಶವನ್ನು ಮರುಪರಿಶೀಲನೆ ಮಾಡಿದರೆ ಒಳ್ಳೆಯದು ಎಂದು ಮೈಸೂರು ಚಿತ್ರಮಂದಿರ ಮಾಲೀಕರ ಸಂಘದ ಕಾರ್ಯದರ್ಶಿ ರಾಜಾ ರಾಮ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details