ಕರ್ನಾಟಕ

karnataka

ETV Bharat / state

KSOU ಆಡಿಟೋರಿಯಂನಲ್ಲಿ ಸಿದ್ಧವಾಯಿತು ಕೋವಿಡ್ ಕೇರ್ ಸೆಂಟರ್ - District Commissioner Abhiram G. Shankar

ಮೈಸೂರಿನ ಹೊರವಲಯದ ಮಂಡಕಳ್ಳಿಯ ಸಮೀಪ ಇರುವ ಕರ್ನಾಟಕ ರಾಜ್ಯ ಮುಕ್ತ ವಿವಿಯ ಆಡಿಟೋರಿಯಂ ಮತ್ತು ಅಕಾಡೆಮಿಕ್ ಭವನದಲ್ಲಿ ಇರುವ 55 ರೂಮ್​ಗಳಲ್ಲಿ 600 ಬೆಡ್​ಗಳ ಹೈಟೆಕ್ ಕೋವಿಡ್ ಕೇರ್ ಸೆಂಟರ್​​ನ್ನು ಸಿದ್ಧಗೊಳಿಸಲಾಗುತ್ತಿದ್ದು, ಇಲ್ಲಿ ಐಷಾರಾಮಿ ಹೋಟೆಲ್ ಮಾದರಿಯ ಸೌಲಭ್ಯ ಒದಗಿಸಲಾಗಿದೆ.

Mysore
ಕೋವಿಡ್ ಕೇರ್ ಸೆಂಟರ್

By

Published : Jul 11, 2020, 4:32 PM IST

ಮೈಸೂರು :ನಗರದ ಹೊರವಲಯದ ಮಂಡಕಳ್ಳಿಯಲ್ಲಿ ಇರುವ ಕೆಎಸ್‌ಒಯು ಆಡಿಟೋರಿಯಂನಲ್ಲಿ ನೂತನವಾಗಿ ಕೋವಿಡ್ ಕೇರ್ ಸೆಂಟರ್ ಸೇವೆಗೆ ಸಿದ್ಧವಾಗುತ್ತಿದೆ. ಇದರಲ್ಲಿರುವ ಸೌಲಭ್ಯಗಳ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಆಡಿಟೋರಿಯಂನಲ್ಲಿ ಕೋವಿಡ್ ಕೇರ್ ಸೆಂಟರ್

ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣ ಹೆಚ್ಚಾಗುತ್ತಿವೆ. ಈಗ ಇರುವ ಕೋವಿಡ್ ಆಸ್ಪತ್ರೆ ಪೂರ್ತಿಯಾಗಿದ್ದು, ಮುಂದೆ ಕೊರೊನಾ ಪಾಸಿಟಿವ್ ಆಗಿ ಬರುವವರಿಗೆ ನಗರದ ಹೊರವಲಯದ ಮಂಡಕಳ್ಳಿಯ ಸಮೀಪ ಇರುವ ಕರ್ನಾಟಕ ರಾಜ್ಯ ಮುಕ್ತ ವಿವಿಯ ಆಡಿಟೋರಿಯಂ ಮತ್ತು ಅಕಾಡೆಮಿಕ್ ಭವನದಲ್ಲಿ ಇರುವ 55 ರೂಮ್​ಗಳಲ್ಲಿ 600 ಬೆಡ್​ಗಳ ಹೈಟೆಕ್ ಕೋವಿಡ್ ಕೇರ್ ಸೆಂಟರ್‌ನ ಸಿದ್ಧಗೊಳಿಸಲಾಗುತ್ತಿದೆ. ಇಲ್ಲಿ ಐಷಾರಾಮಿ ಹೋಟೆಲ್ ಮಾದರಿಯ ಸೌಲಭ್ಯ ಒದಗಿಸಲಾಗಿದೆ.

ಏನೆಲ್ಲಾ ಸೌಲಭ್ಯವಿದೆ? :ಈ ಕೋವಿಡ್ ಕೇರ್ ಸೆಂಟರ್​​ನಲ್ಲಿ 600 ಬೆಡ್ ವ್ಯವಸ್ಥೆ ಇದ್ದು, 55 ರೂಮ್​ಗಳಿವೆ, ಪ್ರತಿ ರೂಮ್​ಗೂ ಟಿವಿ, ಇಂಟರ್‌​ನೆಟ್, ವೈಫೈ ಸೌಲಭ್ಯ, ಸ್ನಾನಕ್ಕೆ ಬಿಸಿ ನೀರು, ಫುಡ್ ವ್ಯವಸ್ಥೆ , ಡಾಕ್ಟರ್ ಮತ್ತು ನರ್ಸ್​ಗಳಿಗೆ ಪ್ರತ್ಯೇಕ ವ್ಯವಸ್ಥೆ ಇದೆ. 24 ಗಂಟೆಯೂ ಸಿಸಿ ಟಿವಿ ಕಣ್ಗಾವಲು ಈ ಕೋವಿಡ್ ಕೇರ್ ಸೆಂಟರ್​​ನಲ್ಲಿದೆ ಎಂದು ಕೇಂದ್ರಕ್ಕೆ ಭೇಟಿ ನೀಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಮಾಹಿತಿ ನೀಡಿದರು.

ಇನ್ನು, ಈ ಕೇಂದ್ರದಲ್ಲಿ ಈ ಸೌಲಭ್ಯದ ಜೊತೆಗೆ ಚೆಸ್, ಕೇರಮ್, ಮೈಂಡ್ ಫ್ರೀ ಗೇಮ್​ಗಳು, ಟೇಬಲ್‌ ಟಿವಿ ವ್ಯವಸ್ಥೆ ಇದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ವಿವರಿಸಿದ್ದಾರೆ.

ABOUT THE AUTHOR

...view details