ಮೈಸೂರು:ಕೋವಿಡ್ ಸೆಂಟರ್ನ ಅವ್ಯವಸ್ಥೆ ವಿರುದ್ಧ ಸೋಂಕಿತರು ಕೊರೊನಾ ವಾರಿಯರ್ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಮಂಡಕಳ್ಳಿಯಲ್ಲಿರುವ ಕೋವಿಡ್ ಕೇರ್ ಸೆಂಟರ್ನಲ್ಲಿ ನಡೆದಿದೆ.
ಕೋವಿಡ್ ಕೇರ್ ಸೆಂಟರ್ ಅವ್ಯವಸ್ಥೆ ವಿರುದ್ಧ ಸೋಂಕಿತರ ಆಕ್ರೋಶ: ವಿಡಿಯೋ - ಮೈಸೂರು ಕೋವಿಡ್ ಸೆಂಟರ್
ಮಂಡಕಳ್ಳಿಯಲ್ಲಿರುವ ಕೋವಿಡ್ ಕೇರ್ ಸೆಂಟರ್ನಲ್ಲಿ, ಅವ್ಯವಸ್ಥೆ ವಿರುದ್ಧ ಸೋಂಕಿತರು ಕೊರೊನಾ ವಾರಿಯರ್ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಹೊರವಲಯದ ಮಂಡಕಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಶೈಕ್ಷಣಿಕ ಭವನದ ಕೋವಿಡ್ ಕೇರ್ ಸೆಂಟರ್ನಲ್ಲಿ ನೂರಾರು ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಕೇರ್ ಸೆಂಟರ್ನಲ್ಲಿ ಆಡಳಿತ ವ್ಯವಸ್ಥೆಯು ಸರಿಯಾದ ಶುಚಿತ್ವ ಕಾಪಾಡುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟಿಸಿದರು. ಕಸ ವಿಲೇವಾರಿ ಮಾಡುತ್ತಿಲ್ಲ, ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಿಲ್ಲ, ಇದರ ಜೊತೆಗೆ ಸೊಳ್ಳೆ, ನೊಣಗಳ ಕಾಟವಿದೆ, ಬೆಡ್ ಶೀಟ್ಗಳನ್ನು ಬದಲಾಯಿಸುತ್ತಿಲ್ಲ, ಇದರಿಂದ ನಮಗೆ ಕೊರೊನಾದಿಂದ ಮುಕ್ತಿ ಸಿಗುವುದಿಲ್ಲ ಎಂದು ಆರೋಪಿಸಿದರು. ಕೋವಿಡ್ ಕೇರ್ ಸೆಂಟರ್ನ ಮೇಲ್ವಿಚಾರಕರನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮನ್ನು ಮನೆಗೆ ಕಳುಹಿಸಿ, ನಾವೇ ಮನೆಯಲ್ಲೇ ಐಸೋಲೇಷನ್ ವ್ಯವಸ್ಥೆ ಮಾಡಿಕೊಂಡು ಅಲ್ಲೇ ಇರುತ್ತೇವೆ ಎಂದು ಒತ್ತಾಯಿಸಿದರು. ಸೋಂಕಿತರು ಸಾಮಾಜಿಕ ಅಂತರವನ್ನು ಮರೆತು ಗುಂಪು ಗುಂಪಾಗಿ ಸೇರಿಕೊಂಡು ಆಡಳಿತ ವ್ಯವಸ್ಥೆ ಹಾಗೂ ಕೊರೊನಾ ವಾರಿಯರ್ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.