ಮೈಸೂರು : ಪ್ರತಿಭಟನೆ ವೇಳೆಯಲ್ಲಿ ಫ್ರಿ ಕಾಶ್ಮೀರ ನಾಮಫಲಕ ಪ್ರದರ್ಶಿಸಿದ ಯುವತಿ ನಳಿನಿ ಬಾಲಕುಮಾರ್ಗೆ ಜಿಲ್ಲಾ ಹೆಚ್ಚುವರಿ ಎರಡನೇ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ನಳಿನಿ ಬಾಲಕುಮಾರ್ ಹಾಗೂ ಪ್ರತಿಭಟನೆ ಮುಂದಾಳತ್ವ ವಹಿಸಿದ್ದ ಮಾನಸಗಂಗೋತ್ರಿ ಸಂಶೋಧನಾ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮರಿದೇವಯ್ಯ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ನಳಿನಿ ಪರ ವಕೀಲರ 8 ಷರತ್ತುಗಳನ್ನು ವಿಧಿಸಿ, 50 ಸಾವಿರ ಬಾಂಡ್, ಒಬ್ಬ ವ್ಯಕ್ತಿಯ ಶೂರಿಟಿ, ಒಂದು ತಿಂಗಳ ಒಳಗೆ ಪಾಸ್ಪೋರ್ಟ್ ಪೊಲೀಸ್ ವಶಕ್ಕೆ ನೀಡುವಂತೆ ಸೂಚನೆ ನೀಡಿದೆ. ಜೊತೆಗೆ ತನಿಖೆಗೆ ಸಹಕಾರ ನೀಡುವುದು.15 ದಿನಕ್ಕೊಮ್ಮೆ ,ಬೆಳಗ್ಗೆ 10 ರಿಂದ 12 ಗಂಟೆ ಒಳಗೆ ಠಾಣೆಗೆ ಭೇಟಿ ನೀಡಿ, ತನಿಖೆಗೆ ಸಹಕಾರ ನೀಡಬೇಕು ಎಂದು ಎಚ್ಚರಿಕೆ ಕೂಡ ನೀಡಿದೆ.
ಏನಿದು ಪ್ರಕರಣ
ಜೆಎನ್ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಮಾನಸ ಗಂಗೋತ್ರಿ ಆವರಣದಲ್ಲಿ ಜನವರಿ 8 ರಂದು ಸಂಶೋಧನಾ ವಿದ್ಯಾರ್ಥಿಗಳ ಸಂಘ ಹಾಗೂ ವಿವಿಧ ಸಂಘಟನೆಗಳು ನಡೆಸಿದ ಪ್ರತಿಭಟನೆ ವೇಳೆಯಲ್ಲಿ ನಳಿನಿ ಬಾಲಕುಮಾರ್ ಅವರು 'ಫ್ರಿ ಕಾಶ್ಮೀರ' ನಾಮಪಲಕ ಪ್ರದರ್ಶಿಸಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.