ಮೈಸೂರು:ಪತ್ನಿಯ ತಿಥಿ ದಿನವೇ ಪತಿಯೂ ಕೋವಿಡ್ಗೆ ಬಲಿಯಾದ ಹೃದಯವಿದ್ರಾವಕ ಘಟನೆ ನಗರದಗಂಗೋತ್ರಿ ಲೇಔಟ್ನಲ್ಲಿನಡೆದಿದ್ದು, ದಂಪತಿಯ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.
ಕೆ.ಸುಷ್ಮಾ (37) ಡಿ. ಪ್ರಸನ್ನ (44) ಮೃತ ದಂಪತಿ. ಸುಷ್ಮಾ ಹಾಸನ ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದರು. ಪತಿ ಪ್ರಸನ್ನ ಮೈಸೂರು ವಿವಿಯ ತೋಟಗಾರಿಕೆ ವಿಭಾಗದ ತಾತ್ಕಾಲಿಕ ವಾಹನ ಚಾಲಕನಾಗಿದ್ದರು.
ತಿಂಗಳ ಹಿಂದೆ ದಂಪತಿಗೆ ಕೋವಿಡ್ ಸೋಂಕು ತಗುಲಿತ್ತು. ಹೀಗಾಗಿ ಇಬ್ಬರೂ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದರು. ಕ್ರಮೇಣ ಸೋಂಕು ಉಲ್ಬಣಗೊಂಡು ಸುಷ್ಮಾ ಮೃತಪಟ್ಟಿದ್ದರು. ಬಳಿಕ ಪತಿ ಪ್ರಸನ್ನ, ಮೇಟಗಳ್ಳಿ ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಾಗಿದ್ದರು. ದುಖಃದ ಸಂಗತಿಯೆಂದರೆ ಪತ್ನಿ ಮೃತಪಟ್ಟು ಅವರ ತಿಥಿ ದಿನವೇ ಪತಿ ಪ್ರಸನ್ನ ಕೂಡ ಇಹಲೋಕ ತ್ಯಜಿಸಿದ್ದಾರೆ. ದಂಪತಿಯ ಸಾವಿನಿಂದ ಅವರ 14 ಮತ್ತು 12 ವರ್ಷದ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.
ಓದಿ : ಮೈಸೂರು: ವರದಕ್ಷಿಣೆ ಕಿರುಕುಳ ತಾಳಲಾರದೆ ಗೃಹಿಣಿ ನೇಣಿಗೆ ಶರಣು