ಕರ್ನಾಟಕ

karnataka

ETV Bharat / state

ಪ್ರಿ ವೆಡ್ಡಿಂಗ್ ಫೋಟೋಶೂಟ್ ವೇಳೆ ಜೋಡಿಯ ಸಾವು: ಘಟನೆಗೆ ಕಾರಣವಾಯ್ತು ಟೈಟಾನಿಕ್ ಫೋಟೋ ಶೂಟ್! - mysore news

ಈ ಜೋಡಿ ಫೋಟೋ ತೆಗೆಸಿಕೊಳ್ಳುವ ಆಸೆಗೆ ಜೀವವನ್ನೇ ಕಳೆದುಕೊಂಡಿದ್ದಾರೆ. ಇದಕ್ಕೆ ಕಾರಣವಾದದ್ದು ಟೈಟಾನಿಕ್ ಫೋಟೋ ಶೂಟ್. ಟೈಟಾನಿಕ್​ನಲ್ಲಿ ಜೋಡಿ ತೆಗೆಸಿಕೊಂಡಿದ್ದ ಫೋಟೋ ರೀತಿ ತಾವೂ ಕೂಡ ತೆಗೆಸಿಕೊಳ್ಳಲು ಹೋಗಿ ನೀರು ಪಾಲಾಗಿದ್ದಾರೆ.

Couple death while taking Pre Wedding photoshoot
ಪ್ರಿ ವೆಡ್ಡಿಂಗ್ ಫೋಟೋಶೂಟ್ ವೇಳೆ ಜೋಡಿಯ ಸಾವು

By

Published : Nov 9, 2020, 11:56 PM IST

ಮೈಸೂರು: ತಲಕಾಡಿನ ಕಾವೇರಿ ನದಿಯಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡುವ ವೇಳೆ ತೆಪ್ಪ ಮಗುಚಿ ಮದುವೆಗೆ ಮೊದಲೇ ದುರಂತವಾಗಿ ಸಾವಿಗೀಡಾದ ಪ್ರಕರಣಕ್ಕೆ ಮೂಲ ಕಾರಣ ತಿಳಿದುಬಂದಿದೆ.

ಜಿಲ್ಲೆಯ ತಿ. ನರಸೀಪುರ ತಾಲೂಕಿನ ತಲಕಾಡು ಬಳಿಯ ಕಾವೇರಿ ನದಿಯಲ್ಲಿ ಮೈಸೂರು ನಗರದ ಕ್ಯಾತಮಾರನಹಳ್ಳಿಯ ವಧು ಶಶಿಕಲಾ, ವರ ಚಂದ್ರು ನವೆಂಬರ್ 22 ರಂದು ಹಸೆಮಣೆ ಏರಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ನಗರದ ಖಾಸಗಿ ಫೋಟೋಗ್ರಾಫರ್ ಕೀರ್ತಿ ಎಂಬ ಹುಡುಗನನ್ನು ಕರೆದುಕೊಂಡು ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಪ್ರಿ ವೆಡ್ಡಿಂಗ್ ಶೂಟ್ ಮಾಡಲು ಹೋಗಲು ತೀರ್ಮಾನಿಸಿದ್ದರು. ಆದರೆ ಶ್ರೀರಂಗಪಟ್ಟಣ ಬೇಡ ತಲಕಾಡಿಗೆ ಹೋಗೋಣ ಎಂದು ವರ ತೀರ್ಮಾನ ಮಾಡಿಕೊಂಡು ಅಲ್ಲಿಗೆ ಕರೆದುಕೊಂಡು ಹೋಗಿದ್ದನಂತೆ.

ಪ್ರಿ ವೆಡ್ಡಿಂಗ್ ಫೋಟೋಶೂಟ್ ವೇಳೆ ಜೋಡಿಯ ಸಾವು

ದುರಂತ ನಡೆದಿದ್ದು ಹೇಗೆ ?

ತಲಕಾಡಿನ ಮುಡುಕುತೊರೆಯ ಬಳಿಯ ಕಾವೇರಿ ನದಿ ತೀರದಲ್ಲಿ ಫೋಟೋಶೂಟ್​ ಮಾಡಿಸಿಕೊಂಡ ಇವರು ಇನ್ನೇನು ಮನೆಗೆ ಹೊರಡಬೇಕು ಎನ್ನುವಾಗ ಕಾವೇರಿ ನದಿಯಲ್ಲಿ ಕೊನೆಯ ಫೋಟೋವನ್ನು ಟೈಟಾನಿಕ್ ಶಾಟ್ಸ್ ರೀತಿಯಲ್ಲಿ ತೆಗೆಸಿಕೊಳ್ಳಬೇಕು ಎಂದು ನಿರ್ಧರಿಸಿದ್ದಾರೆ. ಈ ಹಿನ್ನೆಲೆ ಫೋಟೋಗ್ರಾಫರ್​ ಕಾವೇರಿ ನದಿ ತೀರದಲ್ಲಿದ್ದ ಬೋಟ್​ಗಳ ಮೇಲೆ ನಿಂತು ಫೋಟೋ ತೆಗೆದರೆ ಚೆನ್ನಾಗಿ ಮೂಡಿಬರುತ್ತದೆ ಎಂದು ಬೋಟ್​ ಮಾಲೀಕರ ಬಳಿ ಬೋಟ್​ ಕೇಳಿದ್ದಾರೆ. ಆದರೆ, ಅವರು ಬರಲು ಒಪ್ಪದಿದ್ದಾಗ ತೆಪ್ಪವನ್ನು ತೆಗೆದುಕೊಂಡು ಹೋಗಿ ಫೋಟೋ ಶೂಟ್​ ಮಾಡಲು ಮುಂದಾಗಿದ್ದಾರೆ.

ಇನ್ನು ತೆಪ್ಪದ ಮೇಲೆ ವಧು ಹತ್ತುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ. ಇವಳನ್ನು ಹಿಡಿಯಲು ಹೋದ ವರ ಕೂಡ ನೀರಿಗೆ ಬಿದ್ದಿದ್ದಾನೆ. ಇಬ್ಬರಿಗೂ ಈಜು ಬಾರದ ಕಾರಣ ನೀರುಪಾಲಾಗಿ ದುರಂತ ಅಂತ್ಯ ಕಂಡಿದ್ದಾರೆ.

ABOUT THE AUTHOR

...view details