ಮೈಸೂರು:ಎಲ್ಲೆಡೆ ದಸರಾ ಹಬ್ಬ ಕಳೆಗಟ್ಟಿದ್ದು, ಆಕರ್ಷಕ ಜಂಬೂ ಸವಾರಿಗೆ ಕ್ಷಣಗಣನೆ ಶುರುವಾಗಿದೆ. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬನ್ನಿ ಪೂಜೆ ನೆರವೇರಿಸಿದರು.
ಬೆಳಗ್ಗೆಯಿಂದಲೇ ಅರಮನೆಯ ಆವರಣದಲ್ಲಿ ಪಟ್ಟದ ಆನೆ, ಕುದುರೆ, ಹಸುವಿಗೆ ಪೂಜೆ ಸಲ್ಲಿಸಿ, ನಂತರ ಉತ್ತರ ಪೂಜೆ ವಿಧಿ ವಿಧಾನಗಳು ಆರಂಭವಾಗಿದ್ದವು. ಜಟ್ಟಿ ಕಾಳಗದ ನಂತರ ಯದುವೀರ್ ವಿಜಯ ಯಾತ್ರೆ ನಡೆಸಿದರು.
ಬನ್ನಿ ಪೂಜೆ ನೆರವೇರಿಸಿದ ರಾಜವಂಶಸ್ಥ ಯದುವೀರ್ ಚಾಮರಾಜ ಒಡೆಯರ್ ಈ ಸಂದರ್ಭದಲ್ಲಿ ಭುವನೇಶ್ವರಿ ದೇವಾಲಯದ ಆವರಣದಲ್ಲಿರುವ ಬನ್ನಿ ಅಥವಾ ಶಮಿ ವೃಕ್ಷಕ್ಕೆ ಅರಮನೆಯ ಆಯುಧಗಳನ್ನು ತಂದು ಪೂಜೆ ಸಲ್ಲಿಸಲಾಯಿತು.
ಆದರೆ, ಈ ಬಾರಿ ಯದುವೀರ್ ಬೆಳ್ಳಿ ಪಲ್ಲಕ್ಕಿಯಲ್ಲಿ ಬದಲಾಗಿ ತಮ್ಮ ಐಷಾರಾಮಿ ಕಾರಿನಲ್ಲಿ ಬಂದು ಪೂಜೆ ಸಲ್ಲಿಸಿದರು. ಈ ಪೂಜೆಯಲ್ಲಿ ಅರಮನೆ ಆನೆ, ಒಂಟೆ, ಕುದುರೆ, ಹಸುಗಳು ಹೆಜ್ಜೆ ಹಾಕಿದವು.