ಮೈಸೂರು: ದಸರಾ ಉತ್ಸವಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ, ಕೊರೊನಾ ನಡುವೆ ಅರಮನೆ ಕಾರ್ಯಚಟುವಟಿಕೆ ಚುರುಕುಗೊಳ್ಳುತ್ತಿದೆ. ಅರಮನೆ ಆವರಣದಲ್ಲಿರುವ ಫಿರಂಗಿಗಳನ್ನು ಸಿಬ್ಬಂದಿ ಸ್ವಚ್ಛಗೊಳಿಸುವ ಕಾರ್ಯ ಆರಂಭಿಸಿದ್ದು, ಶುಕ್ರವಾರ ಎಲ್ಲ ಫಿರಂಗಿಗಳನ್ನು ಸಂಪ್ರದಾಯದಂತೆ ಪೂಜೆ ಮಾಡಲಾಗುವುದು.
ದಸರಾಗೆ ದಿನಗಣನೆ: ಫಿರಂಗಿಗಳ ಸ್ವಚ್ಛತೆ ನೆರವೇರಿಸಿದ ಸಿಬ್ಬಂದಿ
ದಸರಾ ಉತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆಯಲ್ಲಿ ತೊಡಗಿದೆ. ಇನ್ನು ಸಂಪ್ರದಾಯದಂತೆ ಫಿರಂಗಿಗಳ ಪೂಜೆ ನೆರವೇರಲಿದ್ದು, ಇದಕ್ಕಾಗಿ ಫಿರಂಗಿಗಳ ಸ್ವಚ್ಛತಾ ಕಾರ್ಯದಲ್ಲಿ ಸಿಬ್ಬಂದಿ ತೊಡಗಿದ್ದಾರೆ.
ಮೈಸೂರು ಅರಮನೆಯ ಫಿರಂಗಿಗಳು
ಮೊದಲಿಗೆ ಒಣ ತಾಲೀಮು ಅಭ್ಯಾಸ ಮಾಡಲಾಗುವುದು. ಬಳಿಕ ಗಜಪಡೆ ಹಾಗೂ ಅಶ್ವಪಡೆಗಳಿಗೆ ಶಬ್ಧ ಪರಿಚಯಿಸುವ ಉದ್ದೇಶದಿಂದ ಪೂರ್ವ ತಾಲೀಮಿನಲ್ಲಿ ಸಿಡಿಮದ್ದುಗಳನ್ನು ಸಿಡಿಸಲಾಗುವುದು. ಸರಳ ದಸರಾ ಆಚರಣೆ ಮಾಡುತ್ತಿರುವುದರಿಂದ ಈ ಬಾರಿ ಅರಮನೆ ಆವರಣದಲ್ಲಿ ಮಾತ್ರ ಕುಶಾಲತೋಪು ಸಿಡಿಯಲಿದ್ದು, ಪಂಜಿನ ಕವಾಯತು ಮೈದಾನದಲ್ಲಿ ಕಾರ್ಯಕ್ರಮಗಳನ್ನು ಮೊಟಕುಗೊಳಿಸಲಾಗಿದೆ ಎಂದು ಅರಮನೆಯ ಕುಶಾಲತೋಪು ಉಸ್ತುವಾರಿಯಾಗಿರುವ ಸಿದ್ದರಾಜು ಮಾಹಿತಿ ನೀಡಿದ್ದಾರೆ.